ಕಟೀಲು ದೇವಸ್ಥಾನಕ್ಕೆ ಸೀರೆ ಕಾಣಿಕೆ

Mithun Kodethoor

Kateel-07061301

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಮೇ ತಿಂಗಳೊಂದರಲ್ಲೇ 3500ರಷ್ಟು ಸೀರೆಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದು, ಒಂದೇ ದಿನ 260ಸೀರೆಗಳ ಸಮರ್ಪಣೆಯ ದಾಖಲೆಯಾಗಿದೆ.
ಮದುವೆ, ಆರೋಗ್ಯ, ಗೃಹಪ್ರವೇಶ, ಇಷ್ಟಾರ್ಥ ಸಿದ್ಧಿ ಮುಂತಾದ ಕಾರಣಗಳಿಗೆ ಹರಕೆ ಹೇಳಿಕೊಳ್ಳುವ ಭಕ್ತರು ಕಟೀಲು ದೇಗುಲಕ್ಕೆ ಸೀರೆ ಕಾಣಿಕೆ ನೀಡುತ್ತಿದ್ದು, ರೂ.300ರಿಂದ ರೂ.15ಸಾವಿರ ಮೌಲ್ಯದ ವರೆಗೂ ಇರುತ್ತವೆ. ವರ್ಷಂಪ್ರತಿ ಹದಿನೆಂಟರಿಂದ ಇಪ್ಪತ್ತು ಸಾವಿರಗಳಷ್ಟು ಸೀರೆಗಳನ್ನು ಭಕ್ತರು ನೀಡುತ್ತಿದ್ದು, ಮೇ ಹಾಗೂ ಶ್ರಾವಣ ಮಾಸಗಳಲ್ಲಿ ಹೆಚ್ಚು ಸೀರೆಗಳ ಸಮರ್ಪಣೆ ನಡೆಯುತ್ತದೆ. ಈ ಸೀರೆಗಳನ್ನು ಏಲಂ ಮಾಡುವುದಿಲ್ಲ. ಬದಲಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಭಕ್ತರಿಗೆ ನೀಡಲಾಗುತ್ತದೆ. ಕಟೀಲಿನ ಯಕ್ಷಗಾನ ಮೇಳಗಳಲ್ಲಿ ಬಳಸಲು ನೀಡಲಾಗುತ್ತದೆ. ಅಲ್ಲದೆ ರಂಗಪೂಜೆ, ಮಹಾ ಅನ್ನಸಂತರ್ಪಣೆಯಲ್ಲದೆ ವಿಶೇಷ ಸೇವೆ ನೀಡುವ ಭಕ್ತರಿಗೆ, ದೇಗುಲಕ್ಕೆ ಭೇಟಿ ನೀಡುವ ಅತಿಗಣ್ಯ ಭಕ್ತರಿಗೆ ಗೌರವಾರ್ಥ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

Comments

comments

Leave a Reply

Read previous post:
ಬಳ್ಕುಂಜೆ: ನವಜೀವನ ಸಮಿತಿ “ಶತದಿನೋತ್ಸವ”

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ಮದ್ಯವರ್ಜನ ಶಿಬಿರಗಳ ಮೂಲಕ ಹಲವು ಕುಟುಂಬಗಳಿಗೆ ನವಜೀವನ ನೀಡಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಸಾರಕ್ಕೆ ಬೆಳಕನ್ನು ನೀಡಿದ ಈ...

Close