ಕೆರೆಗೆ ಜಾರಿ ಬಿದ್ದು ಯುವಕ ಆಕಸ್ಮಿಕ ಸಾವು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಯುವಕನೋರ್ವ ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಮೃತ ಯುವಕ ಕೆಮ್ರಾಲ್ ಗ್ರಾಮದ ನಾರಾಯಣ ಪೂಜಾರಿ ಎಂಬುವರ ಮಗ ಸಂತೋಷ್‌ಪೂಜಾರಿ (25) ಎಂದು ಗುರುತಿಸಲಾಗಿದೆ. ಈತ ಕಳೆದ ಗುರುವಾರದಿಂದ ಮನೆಯಿಂದ ನಾಪತ್ತೆಯಾಗಿದ್ದನು ಎಂದು ಮೂಲ್ಕಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅವಿವಾಹಿತನಾಗಿರುವ ಸಂತೋಷ್‌ಪೂಜಾರಿ ಮನೆಯತ್ತ ನಡೆದುಕೊಂಡು ಬರುತ್ತಿದ್ದಾಗ ಕೆಮ್ರಾಲ್ ಗ್ರಾಮ ಬೊಂಗೋಟ್ಟು ಎಂಬಲ್ಲಿ ರಾತ್ರಿ ಸಮಯ ಗದ್ದೆಯ ಬಳಿಯ ಮಾರ್ಗದಲ್ಲಿನ ಕೆರೆಯೊಂದಕ್ಕೆ ಕಾಲು ಜಾರಿ ಬಿದ್ದಿರಬೇಕು ಎಂದ ಶಂಕಿಸಲಾಗಿದೆ.
ಮೂಲ್ಕಿ ಠಾಣೆಯಲ್ಲಿ ಮೃತನ ಸಹೋದರ ಹರೀಶ್ ಪೂಜಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

Kinnigoli-09061304

Comments

comments

Leave a Reply

Read previous post:
ಯಕ್ಷಗಾನ ಹಿಮ್ಮೇಳ ಅಧ್ಯಯನ ಕಮ್ಮಟ

Mithuna Kodethoor ಕಟೀಲು : ಆಧುನಿಕತೆ ಜೊತೆಗೆ ಪರಂಪರೆಯ ಉಳಿಸುವಿಕೆ ಎಲ್ಲ ಕಲಾಪ್ರಾಕಾರಗಳಂತೆ ಯಕ್ಷಗಾನಕ್ಕೂ ಅತ್ಯಗತ್ಯವಿದೆ ಎಂದು ಸಚಿವ ಅಭಯಚಂದ್ರ ಹೇಳಿದರು. ಅವರು ಭಾನುವಾರ ಕಟೀಲು ಶ್ರೀ...

Close