ಯಕ್ಷಗಾನ ಹಿಮ್ಮೇಳ ಅಧ್ಯಯನ ಕಮ್ಮಟ

Mithuna Kodethoor
ಕಟೀಲು : ಆಧುನಿಕತೆ ಜೊತೆಗೆ ಪರಂಪರೆಯ ಉಳಿಸುವಿಕೆ ಎಲ್ಲ ಕಲಾಪ್ರಾಕಾರಗಳಂತೆ ಯಕ್ಷಗಾನಕ್ಕೂ ಅತ್ಯಗತ್ಯವಿದೆ ಎಂದು ಸಚಿವ ಅಭಯಚಂದ್ರ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ (ಪರಂಪರೆ-ಪ್ರಯೋಗ) ಕುರಿತು ಎರಡು ದಿನಗಳ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದುರ್ಗಾಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನ ಸಚ್ಚಿದಾನಂದ ಶೆಟ್ಟಿ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಕಟೀಲು ಮೇಳಗಳ ದೇವೀಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.
ಸಂಚಾಲಕ ಪದ್ಮನಾಭ ಗೌಡ ಸ್ವಾಗತಿಸಿದರು. ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ನೂರಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿದ ಈ ಕಮ್ಮಟಕ್ಕೆ ಕಟೀಲು ದೇವಸ್ಥಾನ, ದುರ್ಗಾ ಮಕ್ಕಳ ಮೇಳ, ಹಾಗೂ ಕಟೀಲು ಯಕ್ಷಗಾನ ಮೇಳಗಳು ಸಹಕಾರ ನೀಡಿವೆ.

Kinnigoli-09061303

Comments

comments

Leave a Reply

Read previous post:
ಜಂಬೋ ಮಾವು…

Narendra Kerekadu ಮೂಲ್ಕಿ ಬಳಿಯ ಮಟ್ಟು ಗ್ರಾಮದ ನಿವಾಸಿ ಪ್ರಸಿದ್ಧ ನಾಟಿ ವೈದ್ಯರಾದ ಯಜ್ಞ ಪಂಡಿತ್‌ರವರ ಮನೆಯ ತೋಟದಲ್ಲಿ ಬೆಳೆದಿರುವ ಈ ಜಂಬೋ ಮಾವು... ಸುಮಾರು 8...

Close