ಶಿಮಂತೂರು :ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಸಾರ್ಥಕತೆಯ ಜೀವನ ಸಾಗಿಸಬೇಕಾದರೆ ಶಿಕ್ಷಣ ಬಹುಮುಖ್ಯ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಿಳಿಮನಸ್ಸಿನಿಂದ ಕಲಿಯಬೇಕು ಎಂದು ಶ್ಯಾಮಪ್ರಸಾದ್ ಮುದ್ರಾಜೆ ಪುತ್ತೂರು ಹೇಳಿದರು.
ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ ಮಂಡಲ ಹಾಗೂ ಮಹಿಳಾ ಘಟಕದ ಜಂಟೀ ಆಶ್ರಯದಲ್ಲಿ ಭಾನುವಾರ ಶಿಮಂತೂರು ಶ್ರೀ ಶಾರದಾ ಫ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನಗಳನ್ನು ವಿತರಿಸಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪದ್ಮಶಾಲಿ ಮಹಾಸಭಾದ ಪುರಂದರ ಡಿ. ಶೆಟ್ಟಿಗಾರ್, ರಿಜ್ವಾನ್, ಶ್ರೀ ಶಾರದಾ ಫ್ರೌಢ ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀಶ್ ಕರಿಕೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ.ಜಿ. ಶಿವರುದ್ರಪ್ಪ, ಶ್ರೀ ವೀರಭದ್ರ ಯುವಕ ಮಂಡಲ ಅಧ್ಯಕ್ಷ ಸುಂದರ ಕೆ. ಶೆಟ್ಟಿಗಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಗುಣ ಎಸ್. ಉಪಸ್ಥಿತರಿದ್ದರು.
ಮನೋಜ್ ಕುಮಾರ್ ಸ್ವಾಗತಿಸಿ, ಹರಿರಾಜ್ ಕುಜಿಂಗಿರಿ ವಂದಿಸಿದರು. ಯಶವಂತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-09061302

Kinnigoli-09061301

Comments

comments

Leave a Reply

Read previous post:
ಕೆರೆಗೆ ಜಾರಿ ಬಿದ್ದು ಯುವಕ ಆಕಸ್ಮಿಕ ಸಾವು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಯುವಕನೋರ್ವ ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೃತ ಯುವಕ...

Close