ಕಟೀಲು : ಹಿಮ್ಮೇಳ ಅಧ್ಯಯನ ಕಮ್ಮಟ ಸಮಾರೋಪ

Mithuna Kodethoor
ಕಟೀಲು : ಅಧ್ಯಯನ, ತರಬೇತಿಗಳ ಮೂಲಕ ಯಕ್ಷಗಾನ ಕಲಾವಿದರನ್ನು ಬೆಳೆಸಿ, ಯಕ್ಷಗಾನ ಕಲೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಬೇಕೆಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು..
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಮಾಯಣ, ಮಹಾಭಾರತಗಳನ್ನು ಜನರಿಗೆ ಸುಲಭವಾಗಿ ತಿಳುಸವ ಮಾಧ್ಯಮವಾದ ಯಕ್ಷಗಾನ ಮತ್ತದರ ಕಲಾವಿದರು ಅಭಿನಂದನೀಯರು ಎಂದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು. ರಾಘವೇಂದ್ರ ನಂಬಿಯಾರ್ ಕಮ್ಮಟದ ಬಗ್ಗೆ ಮಾತನಾಡಿದರು. ಯು.ದುಗ್ಗಪ್ಪ ಸ್ವಾಗತಿಸಿದರು. ಪದ್ಮನಾಭ ಗೌಡ ಬಿಲಿನೆಲೆ ಕಾರ್ಯಕ್ರಮ ನಿರೂಪಿಸಿದರು.

Kateel-11061305

Comments

comments

Leave a Reply

Read previous post:
ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ

Mithuna Kodethoor ಕಟೀಲು : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ, ಜಾಗೃತಿ ಕಾರ್ಯಕ್ರಮ ನಡೆಯಿತು. ಜಿ.ಪಂ.ಸದಸ್ಯ ಈಶ್ವರ್, ಮೆನ್ನಬೆಟ್ಟು ಗ್ರಾ,ಪಂ,ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ,...

Close