ಜಾಗೃತಿ ಸೊಸೈಟಿ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಜಾಗೃತಿ ಸೊಸೈಟಿ, ಮಂಗಳೂರು ಇವರ ಪ್ರಥಮ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಇತ್ತೀಚೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು. ರಾಘವೇಂದ್ರ, ವಕೀಲರು, ಸುರತ್ಕಲ್ ಇವರ ಅಧ್ಯಕ್ಷತೆಯಲ್ಲಿ ಸುಮಾರು 50 ಅರ್ಹ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ವೆಂಕಟ್‌ರಾವ್ ಖಜಾಂಚಿ, ಹಿಂದೂ ವಿದ್ಯಾದಾಯಿನಿ ಸಂಘ, ಸುರತ್ಕಲ್‌ರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೋ.ರಮೇಶ್ ಕುಳಾಯಿ, ಪ್ರೋ.ಕೃಷ್ಣಮೂರ್ತಿ, ಡಾ.ಈಶ್ವರ್ ಭಟ್ ಹಾಗೂ ವಿಜಯಲಕ್ಷ್ಮಿ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.
ಸೊಸೈಟಿ ಕಾರ‍್ಯದರ್ಶಿ ಜಯಶ್ರೀ ಎಂ ರಟ್ಟಿಹಳ್ಳಿ ಸ್ವಾಗತಿಸಿದರು, ದೀಪ್ತಿ ಕಾರ್ಯಕ್ರಮ ನಿರೂಪಿಸಿದರು, ಸುಶಾನ್ ಕೋಟ್ಯಾನ್ ವಂದಿಸಿದರು.

ಈ ಸಂದರ್ಭದಲ್ಲಿ ಮನೋರಂಜನಾ ಕಾರ್ಯಕ್ರಮವನ್ನು ಹಿಂದೂ ಸೇವಾ ಪ್ರತಿಷ್ಠಾನ, ಕದ್ರಿ ಹಾಗೂ ಶ್ರೀ.ಲಕ್ಷ್ಮಿ ಬಾಯಿ ನಾರಾಯಣರಾವ್ ಪ್ರತಿಷ್ಠಾನದ ಪುಟಾಣಿಗಳು ನಡೆಸಿಕೊಟ್ಟರು.

Mulki-11061308

Comments

comments

Leave a Reply

Read previous post:
ಮೂಲ್ಕಿ: ರಸ್ತೆಬದಿ ಮಾನವ ತಲೆಬುರುಡೆ

Bhagyavan Sanil ಮೂಲ್ಕಿ: ಕೆರೆಕಾಡಿನಲ್ಲಿ ಸೋಮವಾರ ಸಂಜೆ ಮಾನವ ತಲೆಬುರುಡೆ ರಸ್ತೆಬದಿ ಸಿಕ್ಕಿ ಸ್ವಲ್ಪಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಮೂಲ್ಕಿ ಪೋಲೀಸರು ಆಗಮಿಸಿ ತಲೆ ಬುರುಡೆಯನ್ನು...

Close