ಕಿನ್ನಿಗೋಳಿ : ಲಿಂಗ ತಾರತಮ್ಯ ಮಾಹಿತಿ ಶಿಬಿರ

ಕಿನ್ನಿಗೋಳಿ: ಸ್ತ್ರೀ ಪುರುಷ ಮಧ್ಯದಲ್ಲಿ ಸಮಾನತೆಯ ದೃಷ್ಠಿಕೋನ ಹಾಗೂ ಅರಿವು ಮೂಡಿದಾಗ ಸಧೃಡ ಸಮಾಜ ನಿರ್ಮಾಣಗೊಳ್ಳುವುದು. ಸಶಕ್ತ ಮಹಿಳೆ ಇಡೀ ಕುಟುಂಬವನ್ನು ಮುನ್ನಡೆಸಬಲ್ಲಳು. ಎಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಭಾರತಿ ಶೆಟ್ಟಿ ಹೇಳಿದರು.
ಭಾರತ ಸರಕಾರದ ಸ್ಟೆಪ್ ಯೋಜನೆ ಹಾಗೂ ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಆಶ್ರಯದಲ್ಲಿ ಶುಕ್ರವಾರ ಯುಗಪುರುಷ ಸಭಾಂಗಣದಲ್ಲಿ ನಡೆದ ಲಿಂಗ ತಾರತಮ್ಯ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಡೈರಿ ರೈತರ ಕಲ್ಯಾಣ ಟ್ರಸ್ಟ್‌ನ ಪ್ರಾಕೃತಿಕ ವಿಕೋಪ ನಿಧಿಯಿಂದ ಕಮಲಾ ಶೆಟ್ಟಿ ಅವರಿಗೆ ಐದು ಸಾವಿರ ರೂಪಾಯಿಗಳನ್ನು ನೀಡಲಾಯಿತು. ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಿ.ಎಸ್. ಹೆಗ್ಡೆ ಪ್ರಸ್ತಾವನೆಗೈದರು. ಸಹಾಯಕ ವ್ಯವಸ್ಥಾಪಕ ಕೆ. ಸುಬ್ಬರಾವ್, ಸಿದ್ದರಾಜು, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಗಣೇಶ, ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ವಾಣಿ ವೈ. ಶೆಟ್ಟಿ, ಉಪಸ್ಥಿತರಿದ್ದರು.

Kinnigoli 14061304

Comments

comments

Leave a Reply

Read previous post:
ಪದ್ಮನೂರು – ಪುಸ್ತಕ ವಿತರಣೆ

Raghunath Kamath ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಬಯಲಾಟ ಸಮಿತಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಉರ್ಬನ್ ಸ್ಟೇನಿ ಡಿ’ಸೋಜ ಕಟೀಲು ಇವರ...

Close