ಕೆ. ಅಭಯಚಂದ್ರ ಜೈನ್ ಪೌರ ಸನ್ಮಾನ

ಕಿನ್ನಿಗೋಳಿ : ನಾಗರಿಕರ ಸನ್ಮಾನ ಉತ್ತಮ ಜೀವನ ಹಾಗೂ ಸೇವೆ ನೀಡಲು ಪ್ರೇರಕವಾಗಿದೆ. ಕ್ಷೇತ್ರ, ರಾಜ್ಯದ ಅಭಿವೃದ್ಧಿ ಹಾಗೂ ಜನತೆಯ ನಿರೀಕ್ಷೆ ಮತ್ತು ಆಶೋತ್ತರಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಸಂಪೂರ್ಣ ಸೇವೆ ಸಹಕಾರ ನೀಡುವ ಕಾರ್ಯಗತ ಮಾಡುವಲ್ಲಿ ಶ್ರಮಿಸುತೇನೆ. ಮಂತ್ರಿಗಳ ಬಂಗಲೆ ಸೀಮಿತವಾಗಿದ್ದು 1ಲಕ್ಷ ಬಾಡಿಗೆ ಕೊಟ್ಟು ಸರ್ಕಾರದ ಹಣ ಪೋಲು ಮಾಡದೆ ಶಾಸಕರ ಬಂಗಲೆಯಲ್ಲಿ ಉಳಿದು ಜನರ ನೇರ ಸಂಪರ್ಕದಲ್ಲಿ ಇರಲು ಬಯಸಿದ್ದೇನೆ ಎಂದು ರಾಜ್ಯ ಯುವಜನ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಭಾನುವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ಎರಡು ಬಾರಿ ವಿಧಾನಪರಿಷತ್‌ನ ಸದಸ್ಯರಾಗಿ, ಸತತ ನಾಲ್ಕನೇ ಬಾರಿ ಮುಲ್ಕಿ ಮೂಡಬಿದ್ರೆಯ ಶಾಸಕರಾಗಿ ಆಯ್ಕೆಯಾಗಿ, ಇದೀಗ ಕರ್ನಾಟಕ ಸರಕಾರದ ಯುವಜನ ಸೇವೆ ಮತ್ತು ವಿನುಗಾರಿಕಾ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಅವರು ಮುಲ್ಕಿ ಹೋಬಳಿ ನಾಗರಿಕರ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚೈತನ್ಯಶೀಲ, ನಿಷ್ಠುರವಾದಿ ನೇರ ನಡೆನುಡಿಯ ರಾಜಕಾರಣಿಯಾಗಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಸತತವಾಗಿ ಆರಿಸಿ ಬಂದಿದ್ದಾರೆ. ತಾವು ಸಚಿವರಾಗಿ ಕ್ಷೇತ್ರದ ಜನರಿಗೆ ಇನ್ನೂ ಹೆಚ್ಚಿನ ಪ್ರೀತಿ ವಿಶ್ವಾಸದ ಶಾಂತಿ ನೆಮ್ಮದಿಯ ಸೇವೆ ನೀಡುವುದರ ಜೊತೆಗೆ ರಾಜಕೀಯ ಜೀವನದಲ್ಲಿ ಅಭಿವೃದ್ಧಿ ನಿಮ್ಮದಾಗಲಿ ಎಂದು ನಿಟ್ಟೆ ಯುನಿವರ್ಸಿಟಿಯ ಪ್ರೊ_ಚಾನ್ಸ್‌ಲರ್ ಪ್ರೊ.ಡಾ. ಎಂ.ಶಾಂತಾರಾಮ ಶೆಟ್ಟಿಯವರು ಶುಭ ಹಾರೈಸಿ ಸನ್ಮಾನಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಮೊಕ್ತೇಸರ ವೇ.ಮೂ. ಶ್ರೀಕೆ ವಾಸುದೇವ ಆಸ್ರಣ್ಣ, ಕಿನಿಗೋಳಿ ಚರ್ಚ್ ಧರ್ಮಗುರು ಫಾ. ಆಲ್ಫ್ರೆಡ್ ಜೆ. ಪಿಂಟೋ, ಕಿನ್ನಿಗೋಳಿ ಎಂಜೆ.ಎಂ ಮಸೀದಿ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ ಆಶೀರ್ವಚನವಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆಯ ಅರಸರು ಹಾಗೂ ಪೌರ ಸನ್ಮಾನ ಸಮಿತಿ ಅಧ್ಯಕ್ಷ ಮೂಲ್ಕಿ ಅರಮನೆ ದುಗ್ಗಣ್ಣ ಸಾವಂತರು ವಹಿಸಿದ್ದರು. ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕೃಷ್ಣ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.
ಸನ್ಮಾನ ಸಮಿತಿಯ ಪಂಜದ ಗುತ್ತ್ತು ಶಾಂತಾರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸೂರ್ಯಕುಮಾರ್,ಸಂತೋಷ್ ಕುಮಾರ್ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು.
ಮೂಲ್ಕಿ ಅರಮನೆ ದುಗ್ಗಣ್ಣ ಸಾವಂತರು ಸ್ವಾಗತಿಸಿದರು, ಸುಧಾರಾಣಿ ಶೆಟ್ಟಿ ನಿರೂಪಿಸಿದರು. ಹರಿಕೃಷ್ಣ ಪುನರೂರು ವಂದಿಸಿದರು.

Kinnigoli-16061302

Kinnigoli-16061301

Comments

comments

Leave a Reply

Read previous post:
ಕಿನ್ನಿಗೋಳಿ : ಲಿಂಗ ತಾರತಮ್ಯ ಮಾಹಿತಿ ಶಿಬಿರ

ಕಿನ್ನಿಗೋಳಿ: ಸ್ತ್ರೀ ಪುರುಷ ಮಧ್ಯದಲ್ಲಿ ಸಮಾನತೆಯ ದೃಷ್ಠಿಕೋನ ಹಾಗೂ ಅರಿವು ಮೂಡಿದಾಗ ಸಧೃಡ ಸಮಾಜ ನಿರ್ಮಾಣಗೊಳ್ಳುವುದು. ಸಶಕ್ತ ಮಹಿಳೆ ಇಡೀ ಕುಟುಂಬವನ್ನು ಮುನ್ನಡೆಸಬಲ್ಲಳು. ಎಂದು ಕಟೀಲು ದೇವಳ ಪದವಿ...

Close