ಮೂಲ್ಕಿ: ಯುವವಾಹಿನಿ ಘಟಕ ದಶಮಾನೋತ್ಸವ

Bhagyavan Sanil
ಮೂಲ್ಕಿ: ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮುಖ್ಯ ಧ್ಯೇಯದೊಂದಿಗೆ ಪ್ರದೇಶದ ಸಾಂಸ್ಕೃತಿಕ ಹಿನ್ನಲೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಯುವವಾಹಿನಿ ಮೂಲ್ಕಿ ಘಟಕ ಉನ್ನತ ಸ್ಥಾನ ಗಳಿಸಿದೆ ಎಂದು ಉದ್ಯಮಿ ಚಂದ್ರಶೇಖರ್ ನಾನಿಲ್ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ರಾತ್ರಿ ನಡೆದ ಯುವವಾಹಿನಿ ಮೂಲ್ಕಿ ಘಟಕದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಕಳೆದ ೧೦ ವರ್ಷಗಳಿಂದ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಸನ್ಮಾನಿಸಿ,ದಶ ಸಂಭ್ರಮ ಸಾಧನಾ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮೂಲ್ಕಿ ಯುವವಾಹಿನಿ ಸಂಸ್ಥೆಯು ಜಾತಿ ಮತ ಭೇದ ಇಲ್ಲದೆ ಪ್ರದೇಶದ ದೀನ ದುರ್ಬಲರಿಗೆ ವಸತಿ, ಅಹಾರ ಪಡಿತರ ಮತ್ತು ಅನಾರೋಗ್ಯ ವಿಚಾರದಲ್ಲಿ ಸ್ಪಂದಿಸಿ ಮಾದರಿಯಾಗಿ ಬೆಳೆದಿದೆ ಎಂದ ಅವರು ಮುಂದಿನ ದಿನಗಳಲ್ಲಿ ಸೇವೆಗಾಗಿ ಉತ್ತಮ ಆರ್ಥಿಕ ಸಹಕಾರ ನೀಡುವುದಾಗಿ ಪ್ರಕಟಿಸಿದರು.
ಈ ಸಂದರ್ಭ ಚಂದ್ರಶೇಖರ ಸುವರ್ಣ,ಯೋಗೀಶ್ ಕೋಟ್ಯಾನ್,ವಿಜಯಕುಮಾರ್ ಕುಬೆವೂರು,ಹರೀಂದ್ರ ಸುವರ್ಣ,ಉದಯ ಅಮೀನ್ ಮಟ್ಟು,ನರೇಂದ್ರ ಕೆರೆಕಾಡು,ಜಯ ಪೂಜಾರಿ,ಜಯ ಪುಬೆವೂರು, ರಮೇಶ್ ಬಂಗೇರಾ,ರಾಮಚಂದ್ರ ಕೋಟ್ಯಾನ್ ದಶಮಾನೋತ್ಸವ ಸನ್ಮಾನ ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಕುಬೆವೂರು ವಹಿಸಿದ್ದರು. ಶಿಕ್ಷಣ ತಜ್ಞ ಅಡ್ವೆ ರವೀಂದ್ರ ಪೂಜಾರಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್ ಉಪಸ್ಥಿತರಿದ್ದರು.
ರಾಮಚಂದ್ರ ಟಿ.ಕೋಟ್ಯಾನ್ ಸ್ವಾಗತಿಸಿದರು, ದೀಕ್ಷಾ ಸುವರ್ಣ ನಿರೂಪಿಸಿದರು, ಕುಶಾಲಾ ಕೋಟ್ಯಾನ್ ವರದಿ ಮಂಡಿಸಿದರು, ರಮಾನಾಥ ಸುವರ್ಣ ವಂದಿಸಿದರು.

Kinnigoli-1706201303

Comments

comments

Leave a Reply

Read previous post:
Kinnigoli-1706201302
ಕಿನ್ನಿಗೋಳಿ- ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ವಲಯ ಯುವ ಕಾಂಗ್ರೇಸ್ ಘಟಕ ಹಾಗೂ ದೇರಳಕಟ್ಟೆ ಯೇನಪೋಯಾ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲಾ ಮಕ್ಕಳಿಗೆ ಉಚಿತ...

Close