ಬಿಲ್ಲವ ಮಂಡಲ ಅಧ್ಯಕ್ಷ-ಜಯ ಸಿ. ಸುವರ್ಣ ಆಯ್ಕೆ

Narendra Kerekadu
ಮೂಲ್ಕಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಅವಿರೋಧವಾಗಿ ಉದ್ಯಮಿ ಹಾಗೂ ಮುಂಬಯಿ ಭಾರತ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಜಯ ಸಿ. ಸುವರ್ಣ ಪುನರಾಯ್ಕೆಗೊಂಡಿದ್ದಾರೆ.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ನಡೆದ ಮಹಾಮಂಡಲದ ಮಹಾ ಸಭೆಯಲ್ಲಿ ಜಯ ಸಿ. ಸುವರ್ಣರು ಕಾರ್ಯಕಾರಿ ಮಂಡಳಿಯ ಮೂಲಕ ಅವಿರೋಧವಾಗಿ ಆಯ್ಕೆಗೊಂಡರು.
ರಾಷ್ಟ್ರೀಯ ಮಟ್ಟದ ಸುಮಾರು 239 ವಿವಿಧ ಬಿಲ್ಲವ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಸಭೆಯಲ್ಲಿ 45 ಸದಸ್ಯರ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಹಿರಿಯ ಸದಸ್ಯ ಹಾಗೂ ನಿವೃತ್ತ ಸಹಕಾರಿ ಸಂಘದ ಉಪ ನಿಬಂಧಕರಾದ ಚಂದ್ರಶೇಖರ ಸುವರ್ಣ ಸುರತ್ಕಲ್‌ರವರು ನಡೆಸಿಕೊಟ್ಟರು.
ಇತರ ಪದಾಧಿಕಾರಿಗಳು; ಉಪಾಧ್ಯಕ್ಷ ಕೆ.ಪ್ರಭಾಕರ ಬಂಗೇರ ಕಾರ್ಕಳ, ಪಿತಾಂಬರ ಹೆರಾಜೆ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಮೋಹನದಾಸ ಪಾವೂರು ಭಂಡಾರ ಮನೆ, ಜೊತೆ ಕಾರ್ಯದರ್ಶಿ ಗಣೇಶ್ ಎಲ್.ಪೂಜಾರಿ ಬೈಂದೂರು, ಸುದರ್ಶನ್ ಎಚ್. ಉಡುಪಿ, ಕೋಶಾಧಿಕಾರಿ ಯು.ನಾರಾಯಣ, ಸಹ ಕೋಶಾಧಿಕಾರಿ ಸದಾಶಿವ ಎನ್.ಆರ್.ಪುರರವರನ್ನು ಆಯ್ಕೆಮಾಡಲಾಯಿತು.
ಮೂಲ್ಕಿಯಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಕಟ್ಟಡವನ್ನು ನವೆಂಬರ್ ತಿಂಗಳಿನಲ್ಲಿ ಉದ್ಘಾಟಿಸಲಾಗುವುದು, ಸಮಾಜ ಸೇವಾ ಸಂಸ್ಥೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯ ಚಟುವಟಿಕೆಯನ್ನು ರೂಪಿಸುವ ಚಿಂತನೆಯೂ ಸಹ ನಡೆದಿದೆ. ಶಿಕ್ಷಣ ಹಾಗೂ ಉದ್ಯೋಗದ ನೆಲೆಯಲ್ಲಿಯೂ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ಜಯ ಸಿ.ಸುವರ್ಣ ಈ ಸಂದರ್ಭದಲ್ಲಿ ಹೇಳಿದರು.

Mulki-18061301

Comments

comments

Leave a Reply

Read previous post:
Kinnigoli-1706201303
ಮೂಲ್ಕಿ: ಯುವವಾಹಿನಿ ಘಟಕ ದಶಮಾನೋತ್ಸವ

Bhagyavan Sanil ಮೂಲ್ಕಿ: ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮುಖ್ಯ ಧ್ಯೇಯದೊಂದಿಗೆ ಪ್ರದೇಶದ ಸಾಂಸ್ಕೃತಿಕ ಹಿನ್ನಲೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಯುವವಾಹಿನಿ ಮೂಲ್ಕಿ ಘಟಕ ಉನ್ನತ ಸ್ಥಾನ...

Close