ಅಭಿವೃದ್ಧಿಗೆ ಬಧ್ಧನಾಗಿದ್ದೇನೆ – ಸಚಿವ ಅಭಯಚಂದ್ರ ಜೈನ್

Bhagyavan Sanil

ಮೂಲ್ಕಿ: ಮೂಲ್ಕಿ ಮೂಡಬಿದ್ರೆಯ ಶಾಸಕನಾಗಿ ಸಚಿವನಾಗಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬಧ್ಧನಾಗಿದ್ದೇನೆ ಎಂದು ಯುವಜನ ಕ್ರೀಡೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಮೂಲ್ಕಿ ನಗರ ಪಂಚಾಯತ್‌ನಲ್ಲಿ ಕಂದಾಯ ಇಲಾಖೆಯಿಂದ ರಾಷ್ಟ್ರೀ ಕುಂಟುಂಬ ಯೋಜನೆಯಲ್ಲಿ ವಿಧವೆಯರಿಗೆ ರೂ 5ಲಕ್ಷ ವೆಚ್ಚದಲ್ಲಿ ಸುಮಾರು 50 ಜನರಿಗೆ ತಲಾ ಹತ್ತುಸಾವಿರದ ಚೆಕ್ಕು ವಿತರಿಸಿದ ಬಳಿಕ ಮಾತನಾಡಿದರು.
ಮೂಲ್ಕಿ ಜನರ ಬಹಳ ಹಿಂದಿನ ಬೇಡಿಕೆಯಾದ ತಾಲೂಕು ನಿರ್ಮಾಣ ಪ್ರಕ್ರಿಯೆಗೆ ಪೂರ್ವ ಭಾವಿಯಾಗಿ 6ತಿಂಗಳ ಒಳಗೆ ಸ್ಪೆಶಲ್ ತಹಶೀಲ್ದಾರ್ ನಿಯೋಜನೆ,ಹಕ್ಕು ಪತ್ರ ರಹಿತರಿಗೆ ಹಕ್ಕು ಪತ್ರ,ಮೂಲ್ಕಿ ವಿದ್ಯುತ್ ಸಬ್ ಸ್ಟೇಶನ್ ಮೇಲ್ದರ್ಜೆಗೆ ಹಾಗೂ ಸರ್ವಿಸ್ ಸ್ಟೇಶನ್‌ಗೆ ಪ್ರಸ್ತಾಪ ಸಲ್ಲಿಸಲಾಗಿದೆ, ಮೂಲ್ಕಿ ಸಮುದಾಯ ಆಸ್ಪತ್ರೆಯ ನವೀಕರಣದೊಂದಿಗೆ ಮೇಲ್ದರ್ಜೆಗೆ ಪ್ರಯತ್ನ ನಡೆಸಲಾಗುವುದು ಎಂದರು. ಸರ್ಕಾರ ಸುಮಾರು 77 ಸಾವಿರ ಕೋಟಿ ಹೊರೆಯೊಂದಿಗೆ ನೀಡಲಿರುವ 1ಕಿಲೋ ಅಕ್ಕಿಗೆ 1ರೂ ಜುಲೈಯಲ್ಲಿ ಪ್ರಾರಂಭಗೊಳ್ಳಲಿದ್ದು ಸಕಲ ತಯಾರಿಗಳು ನಡೆದಿದೆ. ಮೂಲ್ಕಿ ಮೂಡಬಿದ್ರಿಯಲ್ಲಿ ಹೆಚ್ಚಾಗಿ ಲಭ್ಯನಿದ್ದು ಹಿಂದಿನಂತೆ ಜನಸಾಮಾನ್ಯರಿಗೆ ಸಹಕಾರಿಯಾಗುತ್ತೇನೆ ಎಂದರು.
ಈ ಸಂದರ್ಭ ಡೆಪ್ಯೂಟಿ ತಹಶೀಲ್ದಾರ್ ಕುಸುಮಾಕರ ಶೆಟ್ಟಿ, ಕಂದಾಯ ನಿರೀಕ್ಷಕರಾದ ನಿತ್ಯಾನಂದ, ವಿ.ಎ ಮೋಹನ್,ಮೂಲ್ಕಿ ನಪಂ.ಅಧ್ಯಕ್ಷ ಶಶಿಕಾಂತ ಶೆಟ್ಟಿ,ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಮುಖ್ಯಾಧಿಕಾರಿ ಹರಿಶ್ಚಂದ್ರ.ಪಿ.ಕೋಟ್ಯಾನ್, ಪಂಚಾಯತ್ ಸದಸ್ಯರು,ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Kinnigoli-19061305

Comments

comments

Leave a Reply

Read previous post:
Kinnigoli-19061304
ಜೂನ್ 22 ರಂದು ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಮತ್ತು ಎಳತ್ತೂರು ಗ್ರಾಮಗಳ 2013-14ನೇ ಪ್ರಥಮ ಸಾಲಿನ ಗ್ರಾಮ ಸಭೆ ಜೂನ್ 22ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಗುತ್ತಕಾಡು...

Close