ಭ್ರಷ್ಠಾಚಾರ ರಹಿತ ರಾಜಕಾರಣ-ಸಚಿವ ಅಭಯಚಂದ್ರ ಜೈನ್

Bhagyavan Sanil
ಮೂಲ್ಕಿ: ಭ್ರಷ್ಠಾಚಾರ ರಹಿತ ರಾಜಕಾರಣದಿಂದಾಗಿ ಜಾತಿ ಲೆಕ್ಕಚಾರದ ಈ ದಿನಗಳಲ್ಲಿ ಜನರು ನನ್ನನ್ನು ಆರಿಸಿದ್ದಾರೆ. ನಾಯಕರು ಸಚಿವ ಪದವಿ ನೀಡಿದ್ದಾರೆ. ಸರಳ ನೈತಿಕ ಭ್ರಷ್ಠಾಚಾರ ರಹಿತ ಬಲಿಷ್ಟ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆ ಸಜ್ಜಾಗಬೇಕು ಉನ್ನತ ವಿದ್ಯಾಬ್ಯಾಸದೊಂದಿಗೆ ಉತ್ತಮ ಪ್ರಜೆಗಳಾಗಿ ದೇಶವನ್ನು ಮುನ್ನಡೆಸಬೇಕು ಎಂದು ಯುವಜನ ಕ್ರೀಡೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಕಾಲೇಜು ವಿಶ್ವಸ್ಥ ಮಂಡಳಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜನ ಸಾಮಾನ್ಯರೊಡನೆ ಬೆರೆತು ಸೇವೆ ಮಾಡಿದರೆ ಮಾತ್ರ ಮಂತ್ರಿ ಸ್ಥಾನಕ್ಕೆ ಗೌರವ ಈ ನಿಟ್ಟಿನಲ್ಲಿ ಪೋಲಿಸ್ ಎಸ್ಕೋರ್ಟ್ ಹಾಗೂ ಸೈರನ್ ಬಳಸುವುದನ್ನು ನಿಲ್ಲಿಸಿದ್ದೇನೆ. ಅವಕಾಶವನ್ನು ಸದುಪಯೋಗ ಪಡಿಸಿ ನಮ್ಮ ಕ್ಷೇತ್ರಕ್ಕೆ ಮತ್ತು ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುವಲ್ಲಿಶ್ರಮಪಡುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಕೆ.ಪಿ.ಮಧ್ಯಸ್ಥ ಸಚಿವರನ್ನು ಸನ್ಮಾನಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ. ಪಮೀದಾ ಬೇಗಂ, ಆಡಳಿತ ಮಂಡಳಿ ಸದಸ್ಯರಾದ ಹರಿಕೃಷ್ಣ ಪುನರೂರು, ವಿ.ವಿಶ್ವನಾಥ ಕಾಮತ್, ಪ್ರೊ.ನಾಗೇಶ್ ಶೆಣೈ ವೇದಿಕೆಯಲ್ಲಿದ್ದರು.
ಪ್ರೊ| ಕೆ.ಆರ್ ಶಂಕರ್ ಸ್ವಾಗತಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿನಂಧಿಸಿದರು, ಅರುಣಾ ನಿರೂಪಿಸಿದರು, ಪ್ರೊ.ಪಮೀದಾ ಬೇಗಂ ವಂದಿಸಿದರು.

Kinnigoli-19061306

Comments

comments

Leave a Reply

Read previous post:
Kinnigoli-19061305
ಅಭಿವೃದ್ಧಿಗೆ ಬಧ್ಧನಾಗಿದ್ದೇನೆ – ಸಚಿವ ಅಭಯಚಂದ್ರ ಜೈನ್

Bhagyavan Sanil ಮೂಲ್ಕಿ: ಮೂಲ್ಕಿ ಮೂಡಬಿದ್ರೆಯ ಶಾಸಕನಾಗಿ ಸಚಿವನಾಗಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬಧ್ಧನಾಗಿದ್ದೇನೆ ಎಂದು ಯುವಜನ ಕ್ರೀಡೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು. ಸೋಮವಾರ...

Close