ಮೀನುಗಾರರ ಸಮಸ್ಯೆಗೆ ಪರಿಹಾರ- ಅಭಯಚಂದ್ರ ಜೈನ್

Bhagyavan Sanil ಮೂಲ್ಕಿ: ಕರಾವಳಿ ಭಾಗದ ಜನರ ಶಾಸಕನಾಗಿ ಹಲವು ದಶಕಗಳ ಅನುಭವಕ್ಕೆ ಪೂರಕವಾಗಿ ಮೀನುಗಾರಿಕಾ ಮಂತ್ರಿಯಾಗಿ ನಿಯುಕ್ತಿ ಗೊಳಿಸಲಾಗಿದ್ದು ಮೀನುಗಾರರ ಸಮಸ್ಯೆಗಳನ್ನು ತಿಳಿದು ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರ ಮಾಡಲಾಗುವುದು ಎಂದು ಯುವ ಜನ ಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಹೇಳಿದರು. ಸೋಮವಾರ ಮೂಲ್ಕಿ ಕಾರ್ನಾಡು ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಅವರು ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಶೀಘ್ರ ಸ್ಪಂದಿಸುವುದಾಗಿ ತಿಳಿಸಿದರು. ಮೂಲ್ಕಿಯಲ್ಲಿ ಬಪ್ಪನಾಡು ದೇವಳದ ಸ್ಥಳದಲ್ಲಿ ಮೀನು ಮಾರುಕಟ್ಟೆ ಇದ್ದು ಈ ಬಗ್ಗೆ ಚರ್ಚಿಸಿ ಶೀಘ್ರ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಕಾರ್ನಾಡಿನಲ್ಲಿ ಸಧ್ಯ ಇರುವ ಮಾರುಕಟ್ಟೆಗೆ ಕಾಯಕಲ್ಪದ ಜೊತೆಗೆ ಮೀನುಗಾರ ಮಹಿಳೆಯರ ಉಪಯೋಗಕ್ಕೆ ಶೌಚಾಲಯ ನಿರ್ಮಿಸಲಾಗುವುದು ಎಂದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ,ಮಾಜಿ ಅಧ್ಯಕ್ಷ ಬಿಎಂ.ಆಸೀಪ್,ಮೂಲ್ಕಿ ಬ್ಲಾಕ್ ಅಧ್ಯಕ್ಷ ಸದಾಶಿವ ಸಾಲ್ಯಾನ್,ಯೋಗೀಶ್ ಕೋಟ್ಯಾನ್,ವಸಂತ ಬೆರ್ನಾಡ್ ಮತ್ತಿತರರರಿದ್ದರು.

Kinnigoli-19061308

Comments

comments

Leave a Reply

Read previous post:
Kinnigoli-19061307
ಮೂಲ್ಕಿ: ಯುಬಿಎಂಸಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ

Bhagyavan Sanil ಮೂಲ್ಕಿ: ವಿದ್ಯೆಯಿಂದ ಮಾತ್ರ ಬಡತನ ನಿವಾರಣೆ ಸಾಧ್ಯವಾಗಲಿದ್ದು ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಯುವಜನ ಕ್ರೀಡೆ ಮತ್ತು ಮೀನುಗಾರಿಕಾ...

Close