ಕಟೀಲು ಪ್ರೌಢಶಾಲೆ: ಹೆಚ್ಚುವರಿ ವಿಭಾಗ ಮಂಜೂರು

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ 9, 10ನೇ ತರಗತಿಗೆ ಈ ವರೆಗೆ ಹೆಚ್ಚುವರಿ ವಿಭಾಗ ಆರಂಭಿಸಲು ಇದ್ದ ಅಡಚಣೆ ನಿವಾರಣೆಯಾಗಿ ವಿಭಾಗಗಳಿಗೆ ಮಂಜೂರಾತಿ ದೊರೆತಿದೆ. ಎಷ್ಟೋ ವರ್ಷಗಳಿಂದ ಹೆಚ್ಚುವರಿ ವಿಭಾಗದ ಸಮಸ್ಯೆ ಹಾಗೆಯೇ ಇದ್ದಿದ್ದು ಈಗ ಆ ವಿಷಯ ಸಚಿವ ಅಭಯಚಂದ್ರ ಜೈನ್ ಅವರ ಗಮನಕ್ಕೆ ತಂದ ಕೂಡಲೆ ಇಲಾಖೆಗೆ ಮಾಹಿತಿ ನೀಡಿ ಹೆಚ್ಚುವರಿ ತರಗತಿಗಳನ್ನು ಮಂಜೂರು ಮಾಡಿಸಿ ಮಂಜೂರಾತಿ ಪತ್ರವನ್ನು ಶಾಲಾ ಆಡಳಿತ ಮಂಡಳಿಗೆ ನೀಡಿರುತ್ತಾರೆ ಎಂದು ಪ್ರೌಢಶಾಲಾ ಉಪಪ್ರಾಚಾರ‍್ಯ ಸುರೇಶ್ ಭಟ್ ಅವರು ತಿಳಿಸಿದ್ದಾರೆ. ಅನುದಾನ ರಹಿತವಾಗಿ ದೇವಳದಿಂದ ನಡೆಸುವಂತೆ ಮಂಜೂರಾತಿ ದೊರೆತಿದ್ದು ಪ್ರಸ್ತುತ ಪ್ರೌಢಶಾಲೆಯಲ್ಲಿ 8, 9, 10ನೇ ತರಗತಿಗಳಲ್ಲಿ(ಎ. ಬಿ. ಸಿ ಸೆಕ್ಷನ್) 526 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

 

Comments

comments

Leave a Reply

Read previous post:
Kinnigoli-19061308
ಮೀನುಗಾರರ ಸಮಸ್ಯೆಗೆ ಪರಿಹಾರ- ಅಭಯಚಂದ್ರ ಜೈನ್

Bhagyavan Sanil ಮೂಲ್ಕಿ: ಕರಾವಳಿ ಭಾಗದ ಜನರ ಶಾಸಕನಾಗಿ ಹಲವು ದಶಕಗಳ ಅನುಭವಕ್ಕೆ ಪೂರಕವಾಗಿ ಮೀನುಗಾರಿಕಾ ಮಂತ್ರಿಯಾಗಿ ನಿಯುಕ್ತಿ ಗೊಳಿಸಲಾಗಿದ್ದು ಮೀನುಗಾರರ ಸಮಸ್ಯೆಗಳನ್ನು ತಿಳಿದು ಅವರ ಸಮಸ್ಯೆಗಳನ್ನು...

Close