ತೋಕೂರು- ಪುಸ್ತಕ ವಿತರಣೆ

Raghunath Kamath
ಕಿನ್ನಿಗೋಳಿ: ಗುರುಗಳು, ತಂದೆ- ತಾಯಿಯನ್ನು ಎಂದು ನೋಯಿಸಬೇಡಿ ಹಾಗೂ ಕಲಿಸಿದ ಪಾಠ, ಶಾಲೆಯನ್ನು ಮರೆಯಬೇಡಿ ಎಂದು ಹಿರಿಯ ಧಾರ್ಮಿಕ ಮುಖಂಡ ಗುಣಪಾಲ ಶೆಟ್ಟಿ ತೋಕೂರು ಹೇಳಿದರು.
ಇತ್ತೀಚಿಗೆ ಸುಬ್ರಹ್ಮಣ್ಯ ಪ್ರಾ.ಶಾಲೆ ತೋಕೂರು ಫೇಮಸ್ ಯೂತ್ ಕ್ಲಬ್‌ನ ಆಶ್ರಯದಲ್ಲಿ ನಡೆದ ಸಮವಸ್ತ್ರ ಹಾಗೂ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ ಇವರ ಅಧ್ಯಕ್ಷತೆಯಲ್ಲಿ ಸುಮಾರು 20ಸಾವಿರ ರೂ. ವೆಚ್ಚದ ಪುಸ್ತಕ ಹಾಗೂ ಸಮವಸ್ತ್ರವನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಮಂಗಳೀರು ಮಹಾನಗರ ಪಾಲಿಕೆ ಎಂಜಿನಿಯರ್ ಅರುಣ್ ಕುಮಾರ್, ಶಾಲಾ ಶಿಕ್ಷಕಿ ಜಯಲಕ್ಷ್ಮೀ, ಕ್ಲಬ್ ಅಧ್ಯಕ್ಷ ಪ್ರಮೋದ್ ದೇವಾಡಿಗ, ನವೀನ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮೋಹನ್ ದಾಸ್ ಸ್ವಾಗತಿಸಿದರು. ಹಿಮ್‌ಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21061301

Comments

comments

Leave a Reply

Read previous post:
ಕಟೀಲು ಪ್ರೌಢಶಾಲೆ: ಹೆಚ್ಚುವರಿ ವಿಭಾಗ ಮಂಜೂರು

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ 9, 10ನೇ ತರಗತಿಗೆ ಈ ವರೆಗೆ ಹೆಚ್ಚುವರಿ ವಿಭಾಗ ಆರಂಭಿಸಲು ಇದ್ದ ಅಡಚಣೆ ನಿವಾರಣೆಯಾಗಿ ವಿಭಾಗಗಳಿಗೆ ಮಂಜೂರಾತಿ ದೊರೆತಿದೆ....

Close