ಐಕಳ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ‘ನಮ್ಮ ಗ್ರಾಮ ನಮ್ಮ ರಸ್ತೆ’ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಹಲವಾರು ವರ್ಷಗಳಿಂದ ಪಟ್ಟೆ ಶುಂಠಿಪಾಡಿ ಹಾಗೂ ಉಳೆಪಾಡಿ ರಸ್ತೆಗಳು ದುರಸ್ತಿಯಾಗಿಲ್ಲ. ಪಟ್ಟೆ ರಸ್ತೆ ಅರ್ಧ ಮಾತ್ರ ದುರಸ್ತಿಯಾಗಿದೆ. ಇಷ್ಟರವರೆಗೆ ಪ್ರತಿಭಟನೆ ಮಾಡಿಲ್ಲ. ಇನ್ನೂ ಇದೇ ಪರಿಸ್ಥಿತಿ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಾಗೂ ಪಂಚಾಯತಿಗೆ ಮುತ್ತಿಗೆ ಹಾಕಲಾಗುವುದು ಎಂದು ಐಕಳ ಪಂಚಾಯಿತಿ ಗ್ರಾಮಸ್ಥರು ಎಚ್ಚರಿಸಿದರು.

ಐಕಳ ಏಳಿಂಜೆ ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಗ್ರಾಮ ಪಂಚಾಯಿತಿಯ2013-14ನೇ ಪ್ರಥಮ ಸಾಲಿನ ಗ್ರಾಮ ಸಭೆ  ಕಿರೆಂ ಚರ್ಚ್ ಮಿನಿಹಾಲ್‌ನಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯಲ್ಲಿ ನಡೆಯಿತು.

ವಾರ್ಡು ಸಭೆ ಹಾಗೂ ಗ್ರ್ರಾಮ ಸಭೆಯ ಬಗ್ಗೆ ನಿಖರ ಮಾಹಿತಿ ನೀಡಿಲ್ಲ ಕೊನೆ ಗಳಿಗೆಯಲ್ಲಿ ಮಾಹಿತಿ ನೀಡಿದ್ದೀರಾ ಎಂದು ಆಕ್ರೋಶಿತಗೊಂಡ ಗ್ರಾಮಸ್ಥರು ಪಿಡಿಓ, ಕಾರ್ಯದರ್ಶಿ ಹಾಗೂ ಪಂಚಾಯಿತಿ ಸದಸ್ಯರ ಮೇಲೆ ವಾಗ್ದಾಳಿ ನಡೆಸಿದರು. ಐಕಳ ಗ್ರಾಮಕ್ಕೆ ಮಾತ್ರ ಹೆಚ್ಚು ಅನುದಾನ ನೀಡಿ ಏಳಿಂಜೆ ಹಾಗೂ ಉಳೆಪಾಡಿ ಗ್ರಾಮಗಳಿಗೆ ತಾರತಮ್ಯ ಮಾಡುವುದು ಏಕೆ? ಎಂದರು.
ಖರ್ಚು ವೆಚ್ಚಗಳ ವಾರ್ಷಿಕ ವರದಿಯ ಪ್ರತಿಗಳನ್ನು ಹೆಚ್ಚಿನ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ನೀಡಿದಾಗ ಫಲಪ್ರದ ಯಶಸ್ವಿ ಚರ್ಚೆಯಾಗುತ್ತಿದ್ದವು. ಆದರೆ ಐಕಳ ಪಂಚಾಯಿತಿಯಲ್ಲಿ ಮಾತ್ರ ಈವರೆಗೂ ವರದಿಯ ಪ್ರತಿಗಳನ್ನು ನೀಡಿದೆ ಗ್ರಾಮಾಸ್ಥರನ್ನು ಕತ್ತಲಲ್ಲಿಡುವ ಕಾರ್ಯ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದಾಗ ಪಿಡಿಓ ಪ್ರೇಮ್ ಸಿಂಗ್ ಮುಂದಿನ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರಿಗೆ ವರದಿಯ ಪ್ರತಿಗಳನ್ನು ನೀಡಲಾಗು ಎಂದರು.

ಸಭೆ ಪ್ರಾರಂಭವಾದಾಗ ಇಲಾಖಾಧಿಕಾರಿಗಳ ಅನುಪಸ್ಥಿತಿ ಎದ್ದು ತೋರುತ್ತಿತ್ತು.
ಹೆಚ್ಚಿನ ಗ್ರಾಮ ಪಂಚಾಯತಿಗಳಿಗೆ ಸ್ಮಶಾನದ ವ್ಯವಸ್ಥೆಯಿದ್ದರೂ ಐಕಳ ಗ್ರಾಮ ಪಂಚಾಯಿತಿಗಿಲ್ಲ. ಅನೇಕ ವರ್ಷಗಳಿಂದ ಈ ಬಗ್ಗೆ ಪಂಚಾಯತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶಿತಗೊಂಡರು. ಐಕಳ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕ ಸರಕಾರದ ಒಂದು ಎಕೆರೆ ಜಮೀನಿನಲ್ಲಿ ಸ್ಥಳ ನಿಗದಿಯಾಗಿದ್ದು ಆರ್.ಟಿ.ಸಿ. ಕೂಡಾ ಆಗಿದೆ ಎಂದು ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಉತ್ತರವಿತ್ತರು.

ಪಡಿತರ ಚೀಟಿ ವ್ಯವಸ್ಥೆಯ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಸಿಗದೇ ಇರುವುದರಿಂದ ಗೊಂದಲಗಳು ಹೆಚ್ಚಾಗಿದೆ. ಪಡಿತರ ವ್ಯವಸ್ಥೆಯಲ್ಲಿನ ಆನ್ ಲೈನ್ ವ್ಯವಸ್ಥೆಯ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕಾಗಿದೆ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಮನವಿ ಮಾಡಿಕೊಂಡರು.
ಐಕಳ ಕೊಮಂಡೇಲುವಿನಲ್ಲಿ ಸರಕಾರಿ ಜಾಗವಿದ್ದು, ಕಳೆದ ಐದು ವರ್ಷಗಳಿಂದ ಸುಮಾರು ಐನೂರು(500) ನಿವೇಶನ ರಹಿತರ ಅರ್ಜಿಗಳು ಬಾಕಿ ಉಳಿದು ಕೊಂಡಿವೆ. ಪಂಚಾಯಿತಿ ಸೂಕ್ತ ರೀತಿಯಲ್ಲಿ ಗಮನ ಕೊಡುತ್ತಿಲ್ಲ ಯಾಕೆ? ಏಳಿಂಜೆ ಕಂಗುರಿ ಮನೆ ಹತ್ತಿರದ ಪರಿಶಿಷ್ಟ ಜಾತಿ ಹಾಗೂ ವರ್ಗದವರ ಮನೆಗಳೆಗೆ ಹೋಗುವ ರಸ್ತೆ ಹಲವಾರು ವರ್ಷಗಳಿಂದ ದುರಸ್ತಿಯಾಗಿಲ. ಮಳೆಗಾಲದ ಸಮಯ ದಾಮಸ್ ಕಟ್ಟೆಯಲ್ಲಿ ಪ್ರತಿವರ್ಷ ರಸ್ತೆಯಲ್ಲಿಯೇ ಒಂದು ಅಡಿ ನೀರು ನಿಲ್ಲುವುದು ಇವುಗಳ ಬಗ್ಗೆ ಶಾಶ್ವತ ಪರಿಹಾರ ತ್ವರಿತವಾಗಿ ಮಾಡಬೇಕು. ಸರಕಾರ ಸವಲತ್ತುಗಳ ಬಗ್ಗೆ ಊರಿನ ಜನರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಗ್ರಾಮಸ್ಥರು ಹೇಳಿದರು.
ಸಹಾಯಕ ಕೃಷಿ ಇಲಾಖಾ ಅಧಿಕಾರಿ ಅನೀಸ್ ಸಲ್ಮಾ ಕೆ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ, ಪಿಡಿಒ ಪ್ರೇಮ್ ಸಿಂಗ್ ಕಾರ್ಯದರ್ಶಿ ರವೀಂದ್ರ ಪೈ, ಐಕಳ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಚೌಟ, ಇಂಜೀನಿಯರ್ ಪ್ರಶಾಂತ್ ಆಳ್ವ, ಗ್ರಾಮ ಲೆಕ್ಕಿಗ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

Kinnigoli-22061301

Comments

comments

Leave a Reply

Read previous post:
Kinnigoli-21061301
ತೋಕೂರು- ಪುಸ್ತಕ ವಿತರಣೆ

Raghunath Kamath ಕಿನ್ನಿಗೋಳಿ: ಗುರುಗಳು, ತಂದೆ- ತಾಯಿಯನ್ನು ಎಂದು ನೋಯಿಸಬೇಡಿ ಹಾಗೂ ಕಲಿಸಿದ ಪಾಠ, ಶಾಲೆಯನ್ನು ಮರೆಯಬೇಡಿ ಎಂದು ಹಿರಿಯ ಧಾರ್ಮಿಕ ಮುಖಂಡ ಗುಣಪಾಲ ಶೆಟ್ಟಿ ತೋಕೂರು ಹೇಳಿದರು....

Close