ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ ಸುಮುದಾಯ ಭವನ ಹತ್ತಿರವಿದ್ದರೂ ಪಂಚಾಯಿತಿ ಬಳಿಯೇ ತಗಡು ಚಪ್ಪರ ಹಾಕಿ ಗ್ರಾಮ ಸಭೆ ನಡೆಸಿರುವುದು ಸೋಜಿಗವೇ ಸರಿ??? ಎಂದು ರೋಕಿ ಡಿಸೋಜ ಹಾಗೂ ಗ್ರಾಮಸ್ಥರು ಪಂಚಾಯಿತಿಯ ದುಂದು ವೆಚ್ಚದ ಬಗ್ಗೆ ಗಮನ ಸೆಳೆದಾಗ ಪಂಚಾಯಿತಿ ಸದಸ್ಯರ ಮರು ಉತ್ತರವಿರಲಿಲ್ಲ .

ಕೆಮ್ರಾಲ್ ಗ್ರಾಮ ಪಂಚಾಯಿತಿನ ಗ್ರಾಮ ಸಭೆ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಆವರಣದಲ್ಲಿ ನಡೆಯಿತು.
ಪಂಜ-ಉಲ್ಯ ಕೆಂಪುಗುಡ್ಡೆಯಲ್ಲಿ ಮನೆ ನಿವೇಶನ ಹಂಚಿಕೆಯಾಗಿಲ್ಲ ನಿಖರ ಮಾಹಿತಿ ನೀಡಿ. ಪ್ರತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಿದರೂ ಬಳಿಕ ಅದರ ಬಗ್ಗೆ ಗಮನಕೊಡುತ್ತಿಲ್ಲ ಯಾಕೆ? ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಸರಕಾರಿ ಜಾಗ ಇದೆ? ಮಾಹಿತಿ ನೀಡಿ ಎಂದು ಮಾಜಿ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ ಪಟ್ಟು ಹಿಡಿದಾಗ ಸಾರ್ವಜನಿಕರು ಕೂಡಾ ಧ್ವನಿ ಎತ್ತಿದರು. ಪ್ರಭಾರ ಗ್ರಾಮ ಕರಣಿಕ ಲೋಕೇಶ್ ಮಾತನಾಡಿ ಪಂಚಾಯಿತಿಗೆ ಹಾಗೂ ಮೇಲಾಧಿಕಾರಿಗಳಿಗೆ ಇದರ ವರದಿ ನೀಡಲಾಗಿದೆ ಎಂದರು.
ಕೆಂಪುಗುಡ್ಡೆಯಲ್ಲಿ ಉಲ್ಯ ನೆರೆ ಪೀಡಿತ 17 ಕುಟುಂಬಗಳಿಗೆ 1.70 ಎಕರೆ ಸ್ಥಳ ಮೀಸಲು ಇಟ್ಟಿದ್ದು ಇನ್ನೂ ಹಂಚಿಕೆಯಾಗಿಲ್ಲ ಅಲ್ಲಿ ಅಕ್ರಮವಾಗಿ ಮನೆ ಕಟ್ಟಿದವವರ ಪಾಡೇನು? ಎಂದು ಅಲ್ಲಿನ ನಿವಾಸಿಗಳು ಕೇಳಿದಾಗ ” ಕಾನೂನಿನ ಚೌಕಟ್ಟಿನೊಳಗೆ ಉಲ್ಯ ನೆರೆ ಪೀಡಿತ 17 ಕುಟುಂಬಗಳಿಗೆ ಮನೆ ನಿವೇಶನ ನೀಡಲಾಗುವುದು ಜಾಗದ ಸರ್ವೆ ಮಾಡಿ ಲೇಔಟ್ ನಿರ್ಮಾಣದ ಸ್ಕೆಚ್ ಮಾಡಿ ಬಳಿಕ ಹಂಚಲಾಗುವುದು ಈ ಬಗ್ಗೆ ಸರಕಾರದ ಅನುಮತಿ ಪಡೆದು ಮನೆ ಕಟ್ಟಲು ನಿವೇಶನ ಕೊಡಲಾಗುವುದು” ಎಂದು ಪಿಡಿಓ ಗಣೇಶ್ ತಿಳಿಸಿದರು.

ಮಾರುತಿ ನಗರದಲ್ಲಿ ತ್ಯಾಜ್ಯದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಯಿದೆ. ಮಾರುತಿ ನಗರದ ರಸ್ತೆ ಪಕ್ಕ ಕಸದ ತೊಟ್ಟಿ ಇದ್ದು ಬೇರೆ ಸ್ಥಳದಿಂದ ಕೋಳಿ, ಮೀನಿನ ತ್ಯಾಜ್ಯ ಹಾಗೂ ಇತರ ಕಸಗಳನ್ನು ತಂದು ಹಾಕುತ್ತಾರೆ ಇದರಿಂದ ಅಲ್ಲಿನ ಜನರಿಗೆ ತೊಂದರೆಯಾಗುತ್ತಿದೆ. ಕೆಮ್ರಾಲ್ ಪಂಚಾಯಿತಿಗೆ 4.90ಲಕ್ಷ ರೂಪಾಯಿ ವೆಚ್ಚದಲ್ಲಿ ಘನ-ತ್ಯಾಜ್ಯ ವಿಲೇವಾರಿ ಘಟಕದ ಕೆಲಸ ನಡೆಯುತ್ತಿದೆ ನಂತರ ತ್ಯಾಜ್ಯವನ್ನು ಇಲ್ಲೇ ವಿಲೇವಾರಿ ಮಾಡಲಾಗುವುದು ಎಂದು ಪಿಡಿಓ ತಿಳಿಸಿದರು.

ಪಡಿತರ ಚೀಟಿ ನೋಂದಾವಣೆಯಲ್ಲಿ ಸಾಕಷ್ಟು ಗೊಂದಲವಿದ್ದು ಸರಿಯಾದ ಮಾಹಿತಿ ನೀಡುತ್ತಿಲ್ಲ ಕಾದು ಕಾದು ಸುಸ್ತಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದಾಗ ಪಿಡಿಓ ಉತ್ತರ ನೀಡುತ್ತಾ ಪಡಿತರ ಚೀಟಿ ನೊಂದಾವಣೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಕ್ಕೆ ಐದು ಕುಟುಂಬಗಳಿಗೆ ಮಾತ್ರ ನೋಂದಾವಣೆ ಆಗುತ್ತದೆ ಕಂಪ್ಯೂಟರ್ ಸರ್ವರ್ ತುಂಬಾ ಒತ್ತಡದಲ್ಲಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದರು.

ಮೊದಲ ಹಂತದಲ್ಲಿ ಸ್ಮಾರ್ಟ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳ ನೊಂದಣಿ ಪಂಚಾಯಿತಿಯಲ್ಲಿ ಆಗಿತ್ತು, ಪ್ರಸ್ತುತ ಈಗ ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಮಾತ್ರ ನೋಂದಣಿ ಇದ್ದು ಅಲ್ಲಿ ತಮ್ಮ ದಾಖಲೆ ನೀಡಿ ನೊಂದಾಯಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು ಆದರೆ ಆಹಾರ ಪೂರೈಕೆ ಇಲಾಖಾ ಅಧಿಕಾರಿಗಳು ಗೈರುಹಾeರಾಗಿದ್ದರು.

ಪಂಜ ಉಲ್ಯಕ್ಕೆ ರಸ್ತೆ ನಿರ್ಮಿಸಿ ಕೊಡಿ, ಪಂಜ ಅಂಗನವಾಡಿ ಕೇಂದ್ರದ ಪಕ್ಕ ವಿದ್ಯುತ್ ಟ್ರಾನ್ಸ್‌ಪಾರ್ಮರ್‌ನ ತೊಂದರೆ, ಚರಂಡಿಗಳ ದುರಸ್ತಿ ಬಗ್ಗೆ ಚರ್ಚೆ ನಡೆಯಿತು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಉಪಾಧ್ಯಕ್ಷ ರಿಚರ್ಡ್ ಡಿ’ಸೋಜ, ಇತರ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Kinnigoli-22061302

Comments

comments

Leave a Reply

Read previous post:
Kinnigoli-22061301
ಐಕಳ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ‘ನಮ್ಮ ಗ್ರಾಮ ನಮ್ಮ ರಸ್ತೆ’ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಹಲವಾರು ವರ್ಷಗಳಿಂದ ಪಟ್ಟೆ ಶುಂಠಿಪಾಡಿ ಹಾಗೂ ಉಳೆಪಾಡಿ ರಸ್ತೆಗಳು ದುರಸ್ತಿಯಾಗಿಲ್ಲ. ಪಟ್ಟೆ ರಸ್ತೆ ಅರ್ಧ ಮಾತ್ರ ದುರಸ್ತಿಯಾಗಿದೆ....

Close