ಕಿನ್ನಿಗೋಳಿ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ :  ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಮತ್ತು ಎಳತ್ತೂರು ಗ್ರಾಮಗಳ ಸಭೆ ಶನಿವಾರ ಗುತ್ತಕಾಡು ಸಮುದಾಯ ಭವನದಲ್ಲಿ ನಡೆಯಿತು.
ಗುತ್ತಕಾಡು ಸಮುದಾಯ ಭವನ ಕಿನ್ನಿಗೋಳಿ ಪಂಚಾಯಿತಿಯಿಂದ ಸಾಕಷ್ಟು ದೂರವಿದ್ದರಿಂದ ಗ್ರ್ರಾಮಸ್ಥರ ಅನುಪಸ್ಥಿತಿ ಎದ್ದು ತೋರುತ್ತಿತ್ತು. ಸಭಾಂಗಣದಲ್ಲಿ ಪ್ರತಿಧ್ವನಿ ಆಗುತ್ತಿದ್ದರಿಂದ ಇಲಾಖಾ ಮಾಹಿತಿ ಸರಿಯಾಗಿ ಕೇಳುವುದಿಲ್ಲ ಎಂದು ಗ್ರಾಮಸ್ಥರು ದೂರಿದರು. 
ಗುತ್ತಕಾಡು ಶಾಂತಿನಗರ ಪರಿಸರದಲ್ಲಿ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸ್ತವ್ಯ ಹೊಂದಿರುವವರಿಗೆ ಇಲ್ಲಿನವರೆಗೂ ಹಕ್ಕುಪತ್ರ ಸಿಗಲಿಲ್ಲ ಇಲಾಖೆಗೆ ಮನವಿ ಕೊಟ್ಟು ಸುಸ್ತಾಗಿದೆ ಇನ್ನಾದರೂ ಪಂಚಾಯಿತಿ ನಿರ್ಣಯ ಮಾಡಿ ಹಕ್ಕುಪತ್ರ ಸಿಗುವಂತೆ ಮಾಡಬೇಕು ಎಂದು ನೊಂದ ಗ್ರಾಮಸ್ಥರು ಮನವಿ ಮಾಡಿದರು. 
ಎಳತ್ತೂರು ತಾಳಿಪಾಡಿ ಪರಿಸರದಲ್ಲಿ ಮುಸ್ಲಿಮರಿಗೆ ಧಫನ ಭೂಮಿಯಿದೆ ಆದರೆ ಹಿಂದುಗಳು ದೂರದ ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ರುದ್ರಭೂಮಿ ಬಳಸಬೇಕಾದ ಅನಿರ್ವಾಯತೆ ಒದಗಿದೆ. ಕಿನ್ನಿಗೋಳಿ ಪಂಚಾಯಿತಿ ಸೂಕ್ತ ಸ್ಥಳ ಪರಿಶೀಲಿಸಿ ರುದ್ರ ಭೂಮಿಗೆ ಸ್ಥಳ ನೀಡಬೇಕು ಎಂದರು. 
೧೫ ಲಕ್ಷ ವೆಚ್ಚದ ಸ್ವಚ್ಚ ಗ್ರಾi ಯೋಜನೆಯಿಂದ ನೇಕಾರ ಸೌಧದ ಹತ್ತಿರದ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ, ಮಲೀನ ನೀರು ಹತ್ತ್ತಿರದ ಮನೆಗಳ ಮುಂದೆ ನಿಂತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಕೆಲವು ವರ್ಷಗಳಿಂದಲೂ ಈ ಅಸಮರ್ಪಕ ಡ್ರೈನೇಜ್ ವ್ಯವಸ್ಥೆ ಬಗ್ಗೆ ದೂರು ನೀಡಿದರೂ ಆಡಳಿತ ಸ್ಪಂದಿಸಿಲ್ಲ ಎಂದು ರಫಾಯಲ್ ರೆಬೆಲ್ಲೂ ಹಾಗೂ ಗ್ರಾಮಸ್ಥರು ಪಟ್ಟು ಹಿಡಿದು ಆಗ್ರಹಿಸಿದಾಗ, ಶುದ್ದಿಕರಣ ಘಟಕವನ್ನು ನಿರ್ಮಿಸಲು ಕನಿಷ್ಠ ಐದು ಸೆಂಟ್ಸ್ ಜಾಗ ಬೇಕಾಗಿದೆ ಸದ್ಯ ಎರಡು ಸೆಂಟ್ಸ್ ಜಾಗವಿದ್ದು ಇನ್ನು ಮೂರು ಸೆಂಟ್ಸ್ ದೊರಕಿದ ಕೂಡಲೇ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಪಿಡಿಒ ತಿಳಿಸಿದರು. 
ಕಿನ್ನಿಗೋಳಿ, ಎಳತ್ತೂರು, ಗುತ್ತಕಾಡು ಪರಿಸರದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ, ಗುತ್ತಕಾಡು ಗ್ರಾಮೀಣ ಸಡಕ್ ರಸ್ತೆ ಬದಿಯ ಚರಂಡಿ ಅವ್ಯವಸ್ಥೆ, ಮಸೀದಿ ರಸ್ತೆ ಡಾಮಾರೀಕರಣ ಬಗ್ಗೆ ಗ್ರಾಮಸ್ಥರು ವಿನಂತಿಸಿದರು. ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ತಿಳಿಸಿದರು. 
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಎಳತ್ತೂರು ಗ್ರಾಮಗಳಲ್ಲಿ ಜಲಾನಯನ ಇಲಾಖೆಯಿಂದ ೮೦.೭೯ ಲಕ್ಷ ರೂ.ನಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ ಘಟಕ ನಿರ್ವಹಣಾ ಯೋಜನೆ ರೂಪಿಸಲಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳ್ಳಲಿದೆ ಎಂದು ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ವಸಂತ ಎಸ್. ಕುಲಕರ್ಣಿ ತಿಳಿಸಿದರು.
ನೋಡೆಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜುಕುಂದರ್, ಕಂದಾಯ ಇಲಾಖೆಯ ಕಿರಣ್, ಕೃಷಿ ಇಲಾಖೆಯ ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸಹಾಯಕ ಇಂಜೀನಿಯರ್ ವಿಶ್ವನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಕಾರ್ಯದರ್ಶಿ ಒಸ್ವಾಲ್ಡ್ ಪಿಂಟೊ, ಪಿಡಿಒ ಕುಮಾರಿ ದೀಪಿಕಾ ಮತ್ತ್ತಿತರರು ಉಪಸ್ಥಿತರಿದ್ದರು.

kinnigoli25061303

Comments

comments

Leave a Reply

Read previous post:
kinnigoli25061301
ಮೂರುಕಾವೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕಿನ್ನಿಗೋಳಿ: ಸೋಮವಾರ ಬೆಳಿಗ್ಗೆ ಪೆರ್ಮುದೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಾಟಾ ಮ್ಯಾಜಿಕ್ ಐರಿಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ...

Close