ಸ್ವಾವಲಂಬಿ ಬದುಕಿಗೆ ಆಧಾರ – ಮಲ್ಲಿಗೆ ಕೃಷಿ

ಕಿನ್ನಿಗೋಳಿ: ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಮಲ್ಲಿಗೆ ಕೃಷಿ ಪೂರಕವಾಗಿದೆ ಎಂದು ಪಟ್ಟೆ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಸುನಿತಾ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಿನ್ನಿಗೋಳಿ ವಲಯದ ಐಕಳ ಪಟ್ಟೆ ಮೋಹಿನಿ ಕೃಷಿ ತಾಕು ಜಂಟಿಯಾಗಿ ಆಯೋಜಿಸಿದ ಮಲ್ಲಿಗೆ ಕೃಷಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಲಯ ಮೇಲ್ವಿಚಾರಕ ಗಣೇಶ್ ಪ್ರಸ್ತಾವನೆಗೈದರು, ಏಳಿಂಜೆ ಒಕ್ಕೂಟ ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಲ್ಲಿಗೆ ನಾಟಿ, ನಿರ್ವಹಣೆ, ಗೊಬ್ಬರ ಒದಗಣೆ, ಮಾರುಕಟ್ಟೆ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಜನಾರ್ಧನ ಎಂ. ತರಬೇತಿ ನಡೆಸಿಕೊಟ್ಟರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಐಕಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ, ಮತ್ತಿತರರು ಉಪಥಿತರಿದ್ದರು.
ಲಕ್ಷ್ಮೀ ಪ್ರಾರ್ಥಿಸಿ, ಸೇವಾಪ್ರತಿನಿಧಿ ಉಷಾ ಜೆ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಲೀಲಾ ಪ್ರಸ್ನ ಕಾರ್ಯಕ್ರಮ ನಿರೂಪಿಸಿದರು.

kinnigoli25061304

 

Comments

comments

Leave a Reply

Read previous post:
kinnigoli25061303
ಕಿನ್ನಿಗೋಳಿ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ :  ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಮತ್ತು ಎಳತ್ತೂರು ಗ್ರಾಮಗಳ ಸಭೆ ಶನಿವಾರ ಗುತ್ತಕಾಡು ಸಮುದಾಯ ಭವನದಲ್ಲಿ ನಡೆಯಿತು. ಗುತ್ತಕಾಡು ಸಮುದಾಯ ಭವನ ಕಿನ್ನಿಗೋಳಿ...

Close