ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆ

ಕಿನ್ನಿಗೋಳಿ: ವಿಜ್ಞಾನ ಹಾಗೂ ಜ್ಞಾನದಿಂದ ಲಭಿಸಿದ ಕೌಶಲ, ಇವುಗಳಿಂದ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಯಂ ನೆಲೆ ಕಂಡುಕೊಳ್ಳಲು ಸಾಧ್ಯವೆಂದು ಮನಗಂಡು ಕಿನ್ನಿಗೋಳಿ ರೋಟರಿ ಸಂಸ್ಥೆಯು 1987 ರಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿತು. ರೋಟರಿ ಸದಸ್ಯರ ದೂರದರ್ಶಿತ್ವ ಮತ್ತು ನಿಸ್ವಾರ್ಥ ಸೇವೆಯಿಂದಾಗಿ ಈ ಶಿಕ್ಷಣ ಸಂಸ್ಥೆಯು ಫ್ರೌಡ ಶಾಲೆಯಾಗಿ ಬೆಳೆದು ವಿದ್ಯಾಭಿಮಾನಿಗಳ ಮನ್ನಣೆಗೆ ಪಾತ್ರವಾಗಿದೆ. ಮೂರುಕಾವೇರಿಯ ರೋಟರಿ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ತನ್ನ 25ನೇ ವರ್ಷಾಚರಣೆಯ ಸಂದರ್ಭ 2012-13 ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100ಸಾಧನೆ ಮಾಡಿದೆ.

Kinnigoli-26061301

ಈ ಶಿಕ್ಷಣ ಸಂಸ್ಥೆ ಕಿನ್ನಿಗೋಳಿಯ ಮೂರುಕಾವೇರಿಯಲ್ಲಿ ಮೂರು ಮಹಡಿಯ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಎಲ್ಲಾ ಪ್ರಾಥಮಿಕ ಸೌಲಭ್ಯಗಳನ್ನು ನೀಡುವಲ್ಲಿ ಕಿನ್ನಿಗೋಳಿ ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಸರ್ವ ಧರ್ಮ ಸಮಾನ ಎಂಬ ಮುನ್ನುಡಿಯೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿಸಿ ರೂಪಿಸುವ ಕಾರ್ಯ ಈ ಶಿಕ್ಷಣ ಸಂಸ್ಥೆಯದ್ದು.

1998-1999 ಸಾಲಿನಿಂದ 2003-2004  ರವರೆಗೆ ಸತತ  6 ವರ್ಷ ಹಾಗೂ 2006-2007ನೇ ಸಾಲು ಸೇರಿ ಒಟ್ಟು ಎಂಟು ಬಾರಿ ಶೇ.100 ಫಲಿತಾಂಶ ದಾಖಲಿಸಿದ ಕೀರ್ತಿ ಹೊಂದಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ 55  ವಿದ್ಯಾರ್ಥಿಗಳಲ್ಲಿ 7 ವಿಶಿಷ್ಟ ಶ್ರೇಣಿ, 36 ಪ್ರಥಮ ದರ್ಜೆ, 6ದ್ವಿತೀಯ ಶ್ರೇಣಿ, 6ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಹಾಗೂ ಆಡಳಿತ ಮಂಡಳಿಯ ಉತ್ತಮ ಮಾರ್ಗದರ್ಶನದೊಂದಿಗೆ ಶಾಲೆಯ ನಿರ್ವಹಣೆಯಲ್ಲಿ ಎಲ್ಲಾ ಶಿಕ್ಷಕರು ಸಹಕಾರ ನೀಡಿದ್ದರಿಂದ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಗಿಲ್ಬರ್ಟ್ ಡಿ’ಸೋಜ ಹೇಳಿದರು. ಅನುಭವಿ ಶಿಕ್ಷಕ ಶಿಕ್ಷಕೇತರ 26 ಸಿಬ್ಬಂದಿ ವರ್ಗದವರು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಈ ಸಂಸ್ಥೆ ಅಳವಡಿಸಿಕೊಂಡಿರುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ರಿಯಾಯತಿ ದರದಲ್ಲಿ ಬಸ್ಸಿನ ಸೇವೆಯು ನೀಡುತ್ತಿದೆ.

ಸುಸಜ್ಜಿತ (ಗಣಕ ವಿಭಾಗ) ಕಂಪ್ಯೂಟರ್ ಲ್ಯಾಬ್, ಪ್ರಯೋಗಾಲಯ ಇದ್ದು ಪಠ್ಯಗಳ ಜತೆ ಕಂಪ್ಯೂಟರ್, ಭರತನಾಟ್ಯ, ಸಂಗೀತ, ಕರಾಟೆ, ಯೋಗ, ನೃತ್ಯ ಅಲ್ಲದೆ ವಿವಿಧ ಕಲಾ ತರಬೇತಿ ನೀಡಲಾಗುತ್ತಿದೆ. ಪಾಠ್ಯೇತರ ಚಟುವಟಿಕೆಗಳ ಹಲವಾರು ಕ್ಲಬ್‌ಗಳು ಕ್ರಿಯಾಶೀಲವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಎಜು ಕಾಂ ಸ್ಮಾರ್ಟ್ ಕ್ಲಾಸ್ ಮೂಲಕ ನೀಡಲಾಗುತ್ತಿದೆ.

ಪ್ರತೀ ವರ್ಷ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ. 2013-13ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿಯೂ ಕೂಡಾ ಗಣನೀಯ ಸಾಧನೆ ಮಾಡಿದ್ದಾರೆ.

ಬೈಟ್ಸ್
ಕಿನ್ನಿಗೋಳಿಯ ಹಳ್ಳಿ ಪರಿಸರದ ಪ್ರಥಮ ಆಂಗ್ಲ ಮಾಧ್ಯಮ ಫ್ರೌಢ ಶಾಲೆಯಾಗಿದ್ದು ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣ ಸೇವೆ ದೊರೆಯುತ್ತಿದೆ.
ಕಳ್ಳಿಗೆ ಬಾಲಕೃಷ್ಣ ಶೆಟ್ಟಿ
ಶಾಲಾ ಕಾರ್ಯದರ್ಶಿ

Comments

comments

Leave a Reply

Read previous post:
kinnigoli25061304
ಸ್ವಾವಲಂಬಿ ಬದುಕಿಗೆ ಆಧಾರ – ಮಲ್ಲಿಗೆ ಕೃಷಿ

ಕಿನ್ನಿಗೋಳಿ: ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಮಲ್ಲಿಗೆ ಕೃಷಿ ಪೂರಕವಾಗಿದೆ ಎಂದು ಪಟ್ಟೆ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಸುನಿತಾ ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...

Close