ಎಮ್.ಆರ್.ಪೂಂಜ ಐ.ಟಿ.ಐ : ವಿದ್ಯಾರ್ಥಿ ವೇತನ

P.V.Rao

ಕಿನ್ನಿಗೋಳಿ : ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವವನ್ನು ಕೊಟ್ಟು ತಮ್ಮ ತಮ್ಮ ವೃತ್ತಿಯಲ್ಲಿ ಪರಿಶ್ರಮದಿಂದ ಶ್ರೇಷ್ಠತೆಯನ್ನು ಸಾಧಿಸಿದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ನಾಣ್ನುಡಿಯಂತೆ ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಮುನ: ಕೊಡುವಂತಾಗಲಿ ಎಂದು ಮುಲ್ಕಿ ರಾಮಕೃಷ್ಣ ಪೂಂಜ ದತ್ತಿ ನಿಧಿ, ಟ್ರಸ್ಟಿ, ಪದ್ಮಾವತಿ ಹರಿ ಪೂಂಜ,ಹೇಳಿದರು.
ಮಂಗಳವಾರ ತೋಕೂರು ತಪೋವನ ಎಮ್.ಆರ್.ಪೂಂಜ ಐ.ಟಿ.ಐನ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಲ್ಕಿ ರಾಮಕೃಷ್ಣ ಪೂಂಜ ದತ್ತಿನಿಧಿ ವತಿಯಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಿದ್ಯಾರ್ಥಿ ವೇತನವನ್ನು ಸುಮಾರು ೧೭೪ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾ ಸಂಸ್ಥೆಯನ್ನು ಮರೆಯಬಾರದು. ತಮ್ಮ ಸಂಪಾದನೆ ಒಂದು ಭಾಗವನ್ನು ತಾವು ಕಲಿತ ವಿದ್ಯಾ ಸಂಸ್ಥೆಗೆ ದಾನ ಮಾಡಿ ಸಂಸ್ಥೆಯ ಏಳಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಬೇಕು ಎಂದು ಸಂಸ್ಥೆಯ ಹಳೇ ವಿದ್ಯಾರ್ಥಿ ಯೋಗೀಶ್ ಪೂಜಾರಿಯವರು ಕರೆಯಿತ್ತರು.
ಕೃಷ್ಣ ಪೂಜಾರಿ ಮತ್ತು ಶಾರದಾ ಪೂಜಾರಿ, ದಿ| ಐ ಕೃಷ್ಣ ರಾವ್ ಮತ್ತು ಸೀತಮ್ಮ, ಬಪ್ಪನಾಡು ಪಂಡಿತ್ ವಾಸುದೇವಯ್ಯ ಮತ್ತು ಲಕ್ಷ್ಮೀಯಮ್ಮ , ಗೀತಾ ವೆಂಕಟರಮಣ್ ದತ್ತಿನಿಧಿಗಳಿಂದ ಮತ್ತು ಕರ್ನಾಟಕ ಸರಕಾದ ಹಿಂದುಳಿದ ವರ್ಗ ಇಲಾಖೆ ಹಾಗೂ ಅಲ್ಪ ಸಂಖ್ಯಾತ ಇಲಾಖೆಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿ ಚೇತನ್ ಪ್ರಾರ್ಥಿಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯನ್ ಸ್ವಾಗತಿಸಿ, ತರಬೇತಿ ಅಧಿಕಾರಿ ಶ್ರೀ ರಘುರಾಮ ರಾವ್ ಪ್ರಾಸ್ತಾವನೆಗೈದರು. ವಿಶ್ವನಾಥ್ ರಾವ್, ಹರೀಶ್ಚಂದ್ರ ದೇವಾಡಿಗ, ಪ್ರಮೋದ್ ಕುಮಾರ್ ಉಪಸ್ಠಿತರಿದ್ದರು. ಸಂಜೀವ ದೇವಾಡಿಗ ಧನ್ಯವಾದವಿತ್ತರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-27061301

Kinnigoli-27061302

Kinnigoli-27061303

Comments

comments

Leave a Reply

Read previous post:
Kinnigoli-26061304
ಗುತ್ತಕಾಡು- ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಇತ್ತೀಚಿಗೆ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಗುತ್ತಕಾಡು, ಶಾಂತಿನಗರ ಹಾಗೂ ಊರ ದಾನಿಗಳ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗುತ್ತಕಾಡು ಹಾಗೂ ಸ್ಥಳೀಯ...

Close