ಪೊಂಪೈ-ಮಾದಕ ದ್ರವ್ಯ ವರ್ಜನ ದಿನಾಚರಣೆ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳ, ಎನ್ ಎಸ್ ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವರ್ಜನ ದಿನಾಚರಣೆ ಕಾಲೇಜಿನ ಆವರಣದಲ್ಲಿ ನಡೆಯಿತು. ಎನ್ ಸಿ ಸಿ ಕೆಡೆಟ್ ಕ್ಯಾಪ್ಟನ್ ಚಂದ್ರಶೇಖರ್, ಪಿ.ಒ ಕೆಡೆಟ್‌ಗಳಾದ ಶಾಲೆಟ್ ರೆಬೆಲ್ಲೊ, ಚೈತ್ರಾ ಹಾಗೂ ಪ್ರಹ್ಲಾದ್ ಮುಂದಾಳತ್ವ ವಹಿಸಿದ್ದರು. ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಎನ್ ಸಿ ಸಿ ಅಧಿಕಾರಿ ಸಬ್. ಲೆ. ಪುರುಷೋತ್ತಮ ಕೆ.ವಿ., ಎನ್ ಎಸ್ ಎಸ್ ಅಧಿಕಾರಿ ಡಾ| ಗುಣಕರ, ರೆಡ್ ರಿಬ್ಬನ್ ಕ್ಲಬ್‌ನ ನಿರ್ದೇಶಕ ಪ್ರೊ. ಯೋಗೀಂದ್ರ. ಬಿ, ಉಪನ್ಯಾಸಕರಾದ ಡಾ| ವಿಕ್ಟರ್ ವಾಜ್, ಪ್ರೊ. ಥೋಮಸ್ ಜಿ. ಎಮ್ ಮತ್ತು ಫ್ರೀಡಾ ಫ್ಲೇವಿಯ ಡಿಸೋಜಾ ಉಪಸ್ಥಿತರಿದ್ದರು.

Kinnigoli-280601

 

Comments

comments

Leave a Reply

Read previous post:
Kinnigoli-280602
ಕಟೀಲು ದೇವಸ್ಥಾನ ರಥಬೀದಿ

Bhagyavan Sanil ಕಟೀಲು : ಇತಿಹಾಸ ಪ್ರಸಿದ್ದ ಕಟೀಲು ದೇವಸ್ಥಾನದ ರಥಬೀದಿಯಲ್ಲಿರುವ ಕಟ್ಟಡದ ಆವರಣಗೋಡೆ ಕುಸಿದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಆಪಾಯವನ್ನು ಸೃಷ್ಠಿಸಿದೆ.ಕಟೀಲು ಪ್ರಾಥಮಿಕ ಮತ್ತು...

Close