ಪಕ್ಷಿಕೆರೆ ರಸ್ತೆ ಪಕ್ಕ ತ್ಯಾಜ್ಯ ಸಮಸ್ಯೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಪಕ್ಷಿಕೆರೆ ಮುಖ್ಯ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದು ಕೊಳೆಯುತ್ತಿದೆ. ಈ ಘನ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗಿ ದುರ್ವಾಸನೆ ಬರುತ್ತಿರುವುದು ಮತ್ತು ಪರಿಸರ ಹದಗೆಟ್ಟಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಸ್ಥಳೀಯರು ಈಗ ಮೂಗು ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ಎದುರಾಗಿದೆ.

Kateel-02071302

ಕೆಮ್ರಾಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಸದಸ್ಯರು ತ್ಯಾಜ್ಯದ ರಾಶಿಗಳಿರುವ ಸ್ಥಳದಿಂದ ಕಸ ವಿಲೇವಾರಿ ಮಾಡಿಸಿದರೂ ಮರುದಿನ ಅದೇ ಸಮಸ್ಯೆ ತಲೆದೋರುತ್ತಿದೆ. ಕೊಳೆಯುತ್ತಿರುವ ಘನ ತ್ಯಾಜ್ಯದ ರಾಶಿಗಳಿಂದ ಎಲ್ಲ ಕಡೆ ತ್ಯಾಜ್ಯ ಹರಡಿಕೊಂಡಿರುತ್ತದೆ ಮತ್ತು ಗಾಳಿಯಲ್ಲಿ ಹಾರಾಡಿ ಪರಿಸರಕ್ಕೆ ಹರಡಿಕೊಳ್ಳುತ್ತಿದೆ. ಇದರಿಂದ ಪೇಟೆಯ ಸೌಂದರ್ಯ, ಪರಿಸರ ಹಾಳಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ರೂಪಾಂತರಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.

ಸ್ಥಳೀಯವಾಗಿ ಹೆಚ್ಚು ತ್ಯಾಜ್ಯದ ಶೇಖರಣೆಯಾಗುವುದಿಲ್ಲ ಯಾರೋ ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲೇ ವಾಹನಗಳಲ್ಲಿ ಬಂದು ತ್ಯಾಜ್ಯಗಳನ್ನು ರಸ್ತೆ ಬದಿ ಎಸೆಯುತ್ತಿದ್ದು ಸ್ಥಳೀಯ ಆಡಳಿತಕ್ಕೆ ಹಾಗೂ ಸ್ಥ್ಥಳೀಯ ನಿವಾಸಿ ದಾರಿಹೋಕರಿಗೆ ಇದರಿಂದ ಬಹಳಲಷ್ಟು ಸಮಸ್ಯೆಯಾಗುತ್ತಿದೆ. ಸ್ಥಳೀಯಾಡಳಿತ ರಸ್ತೆ ಬದಿಯಲ್ಲಿ ಕಸ ಬಿಸಾಡುವಂತಹ ಕೆಟ್ಟ ಸಂಪ್ರಾಯವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಪರಿಸರ ನಿರ್ಮಲ ಹಾಗೂ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಗ್ರಾಮ ಸಭೆಗಳಲ್ಲಿ ಸಾಕಷ್ಟು ಮಾಹಿತಿ ನೀಡುತ್ತಿದ್ದರೂ ಜನರು ಕಾರ್ಯ ಪ್ರವೃತ್ತರಾಗದಿರುವುದು ಖೇದಕರ ಸಂಗತಿಯಾಗುತ್ತಿದೆ. ಈಗ ಕೆಮ್ರಾಲ್ ಗ್ರಾಮ ಪಂಚಾಯಿತಿ ಪಕ್ಕದ ಸರಕಾರಿ ಸ್ಥಳದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಾಗಾರಿಯು ನಡೆಯುತ್ತಿದೆ. ಗ್ರಾಮಸ್ಥರ ಶಿಕ್ಷಣ ಮತ್ತು ಜಾಗೃತಿ ಮೂಲಕ ಜನರ ಸಹಭಾಗಿತ್ವದಲ್ಲಿ ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮಾಡಿದಾಗ ಮಾತ್ರ ಸ್ವಚ್ಚ ಗ್ರಾಮವಾಗಬಲ್ಲುದು.

Comments

comments

Leave a Reply

Read previous post:
Kateel-02071301
ಜಿಲ್ಲಾ ಪ್ರತಿನಿಧಿ ಪ್ರಶಸ್ತಿ: ಸುಮೀತ್ ಕುಮಾರ್

ಕಿನ್ನಿಗೋಳಿ: ಇತ್ತೀಚಿಗೆ ಹೈದರಾಬಾದ್‌ನಲ್ಲಿ ನಡೆದ ರೋಟರಾಕ್ಟ್ ದಕ್ಷಿಣ ಏಶ್ಯಾ ಸಮಿತಿ 2013 ಸಮ್ಮೇಳನದಲ್ಲಿ ಉತ್ತಮ ಜಿಲ್ಲಾ ಪ್ರತಿನಿಧಿ ಪ್ರಶಸ್ತಿಯನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಸುಮೀತ್ ಕುಮಾರ್ ಪಡೆದಿರುತ್ತಾರೆ. (Past R.I...

Close