ಕಟೀಲು ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

ಕಿನ್ನಿಗೋಳಿ: ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸರಕಾರದ ಶಿಕ್ಷಣ ಯೋಜನೆಗಳು ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಮೌಲ್ಯಾಧರಿತ ಶಿಕ್ಷಣ ದೊರೆಯುತ್ತದೆ. ಎಂದು ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ದೇವಳ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಬದುಕುವ ಹಕ್ಕು, ರಕ್ಷಣೆ ಹಕ್ಕು ಹಾಗೂ ವಿಕಾಸ ಹೊಂದುವ ಹಕ್ಕಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರಂತೆ ಪೋಷಕರ ಪಾತ್ರವು ಬಹುಮುಖ್ಯ. ಪೋಷಕರು ಮಕ್ಕಳಲ್ಲಿ ಉತಮ ಶಿಸ್ತು ಸಂಸ್ಕಾರ ಬಗ್ಗೆ ತಿಳಿಹೇಳಿದಾಗ ಮಾತ್ರ ಉತ್ತಮ ಪ್ರಜೆಯಾಗಬಲ್ಲರು ಎಂದು ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ| ಹಿಲ್ಡಾ ರಾಯಪ್ಪನ್ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಸುಮಾರು ೭೦೦ ಹಣ್ಣಿನ ಸಹಿತ ವಿವಿಧ ಜಾತಿಯ ಗಿಡಗಳನ್ನು ಹಾಗೂ ವಿದ್ಯಾರ್ಥಿ ಐಡಿ ಕಾರ್ಡುಗಳನ್ನು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ೨೦೧೩-೧೪ನೇ ಸಾಲಿನ ನೂತನ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಶಿಕ್ಷಕ-ರಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಾಬು ಶೆಟ್ಟಿ, ನೂತನ ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಗೋಪಾಲಕೃಷ್ಣ ತಂತ್ರಿ, ಪುರುಷೋತ್ತಮ, ಜಯಲಕ್ಷ್ಮೀ, ಕೃಷ್ಣ ಪೂಜಾರಿ, ರವಿ ಕೋಟ್ಯಾನ್, ಗೋಪಾಲಕೃಷ್ಣ ಶೆಟ್ಟಿಗಾರ್, ಯಮುನಾ, ಅರುಣಾ, ಬೇಬಿ, ಸಾಧನ ವಿ.ಎಚ್, ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಸುರೇಶ್ ಭಟ್ ಸ್ವಾಗತಿಸಿದರು, ಶಿಕ್ಷಕರಾದ ಶ್ರೀವತ್ಸ ಹಾಗೂ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-03071302

Comments

comments

Leave a Reply

Read previous post:
ಜು.4: ಮೂಲ್ಕಿ ಪತ್ರಿಕಾ ದಿನಾಚರಣೆ

Narendra Kerekadu ಮೂಲ್ಕಿ: ಮೂಲ್ಕಿ ವಲಯ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಜುಲೈ 4ರ ಗುರುವಾರ ಸಂಜೆ 4ಕ್ಕೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್‌ನಲ್ಲಿ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ....

Close