ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ

ಕಿನ್ನಿಗೋಳಿ: ಸಮಾಜ ಕಲ್ಯಾಣ ಇಲಾಖೆಯಡಿ ಕರ್ನಾಟಕ ಸರಕಾರವು ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಒಂದಾಗಿದೆ.

Kinnigoli-03071301

1995-96ನೇ ಸಾಲಿನಲ್ಲಿ ಮುಲ್ಕಿಯ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಈ ಶಾಲೆ ಪ್ರಸ್ತುತ ಕಮ್ಮಾಜೆಯಲ್ಲಿ ಒಂಬತ್ತು ಎಕರೆ ವಿಸ್ತೀರ್ಣ ಹೊಂದಿರುವ ನಯನ ಮನೋಹರ ಹಳ್ಳಿ ಪರಿಸರದ ಮಡಿಲಿನಲ್ಲಿರುವ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಒಟ್ಟು 230 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆಯಾಗಿ ವ್ಯಾಸಂಗ ನಡೆಸುತ್ತಿದ್ದಾರೆ. ಸುಮಾರು 4 ಕೋಟಿ ರೂ.ಗಳ ವೆಚ್ಚದಲ್ಲಿ ಶಾಲಾ ಸಂಕಿರ್ಣ, ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ, ಅಡುಗೆಮನೆ, ಸಿಬ್ಬಂದಿಗಳ ವಸತಿ ಗೃಹಗಳಿಂದ ನಿರ್ಮಾಣಗೊಂಡು ಸುಸಜ್ಜಿತವಾದ ವ್ಯವಸ್ಥೆ ಹೊಂದಿದ್ದು ಇಪ್ಪತ್ತು ಮಂದಿ ಶಿಕ್ಷಕ ಶಿಕ್ಷಕೇತರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

13 ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇತ್ತೀಚೆಗೆ ಆರು ಬಾರಿ ಶೇ100 ಫಲಿತಾಂಶ ದಾಖಲಿಸಿದೆ. ವಸತಿ ಶಾಲೆಯು ಮುಲ್ಕಿಯಿಂದ ಕಮ್ಮಾಜೆಯ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಸತತವಾಗಿ ಎರಡು ಬಾರಿಯೂ ಶೇ.100 ದಾಖಲಿಸಿದೆ
ಈ ಬಾರಿ ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 2 ವಿಶಿಷ್ಟ ಶ್ರೇಣಿ, 34 ಪ್ರಥಮ ದರ್ಜೆ, 6 ದ್ವಿತೀಯ ಶ್ರೇಣಿ, 1 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವರ್ಷದ ಪ್ರಾರಂಭದಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಬೇಕಾದಂತಹ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪಠ್ಯೇತರ ಚಟುವಟಿಕೆಗಳಾದ ಭರತನಾಟ್ಯ, ಸಂಗೀತ, ಕರಾಟೆ, ಯೋಗ, ಅಲ್ಲದೆ ವಿವಿಧ ಕಲಾ ತರಗತಿಗಳು ಹಾಗೂ ವಿವಿಧ ಚಟುವಟಿಕೆಗಳ ಹಲವಾರು ಕ್ಲಬ್‌ಗಳು ಕ್ರಿಯಾಶೀಲವಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ಶಿಬಿರಗಳಿಂದಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ.
ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಲವು ಬಾರಿ ಆಯ್ಕೆಯಾಗಿದ್ದಾರೆ. D.S.E.R.T  ಬೆಂಗಳೂರು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಾರಿ Intel Award ಪಡೆದಿರುತ್ತಾರೆ.

ಬಾಕ್ಸ್

Comments

comments

Leave a Reply

Read previous post:
Kateel-02071302
ಪಕ್ಷಿಕೆರೆ ರಸ್ತೆ ಪಕ್ಕ ತ್ಯಾಜ್ಯ ಸಮಸ್ಯೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಪಕ್ಷಿಕೆರೆ ಮುಖ್ಯ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದು ಕೊಳೆಯುತ್ತಿದೆ. ಈ ಘನ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗಿ ದುರ್ವಾಸನೆ...

Close