ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಇತರರ ಒಳಿತಿಗಾಗಿ ಬದುಕುವುದೇ ಜೀವನ ಕಲೆ. ಸಮಾಜದಲ್ಲಿರುವ ಬಡವರು, ದೀನದಲಿತರ ಶ್ರೇಯೋಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ನೀಡುವಲ್ಲಿ ರೋಟರಿ sಸದಸ್ಯರು ಶ್ರಮಿಸಬೇಕು ಎಂದು 2015-16 ರ ನಿಯೋಜಿತ ಗವರ್ನರ್ ಡಾ| ಭರತೇಶ್ ಹೇಳಿದರು.
ಸೋಮವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷ ರಾಬರ್ಟ್ ರೊಸಾರಿಯೊ ಮತ್ತು ಕಾರ್ಯದರ್ಶಿ ಜೊಕಿಂ ಸಿಕ್ವೇರಾ ತಂಡಕ್ಕೆ ಡಾ| ಭರತೇಶ್ ಪ್ರತಿಜ್ಞಾ ವಿಧಿ ಭೋದಿಸಿ “ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳನ್ನು ತಲುಪಿಸಿದಾಗ ಶಾಂತಿ ಸೌಹಾರ್ದಗಳು ಹೆಚ್ಚಾಗಿ ಸಮಾಜ ಆರ್ಥಿಕ ಸುದೃಢನೆ ಸಾಧ್ಯ ” ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು
ರೋಟರಿ ವಲಯ 3ರ ಸಹಾಯಕ ಗವರ್ನರ್ ಮಾಧವ ಸುವರ್ಣ ಹೆರಿಕ್ ಪಾಯಸ್ ಸಂಪಾದಕತ್ವದ ಕಿನ್ನಿಗೋಳಿ ರೋಟರಿ ಮುಖವಾಣಿ “ಸಿಂಚನ” ವನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ಎನ್. ಪಿ. ಶೆಟ್ಟಿ ವೇದಿಕೆಯಲ್ಲಿದ್ದರು. ನಿಕಟ ಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ನಿಕಟ ಪೂರ್ವ ಕಾರ್ಯದರ್ಶಿ ಯಶವಂತ ಐಕಳ ವಾರ್ಷಿಕ ವರದಿ ನೀಡಿದರು.
ಜಯರಾಮ ಪೂಂಜಾ ಅತಿಥಿಗಳನ್ನು ಮತ್ತು ಜೋಸ್ಸಿ ಪಿಂಟೋ ನೂತನ ಸದಸ್ಯರನ್ನು ಪರಿಚಯಿಸಿದರು. ಕಾರ್ಯದರ್ಶಿ ಜೊಕಿಂ ಸಿಕ್ವೇರಾ ವಂದಿಸಿ, ಶರತ್ ಶೆಟ್ಟಿ ಹಾಗೂ ವಿಲಿಯಂ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-03071304

Comments

comments

Leave a Reply

Read previous post:
Kinnigoli-03071303
“ಭವಿಷ್ಯತ್ತಿಗಾಗಿ ಯೋಗ-ಪುನಶ್ಚೇತನ ಶಿಬಿರ”

ಕಿನ್ನಿಗೋಳಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದ ಸರ್ವೋತೋಮುಖ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಯೋಗ ಅತ್ಯವ್ಯಶ. ಬಾಲ್ಯದಿಂದಲೇ ಮಕ್ಕಳಿಗೆ ಯೋಗಾಸನ ಕಲಿಸುವುದರಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕವಾಗಿ ಶಕ್ತಿ ಹೆಚ್ಚುತ್ತದೆ,...

Close