“ಭವಿಷ್ಯತ್ತಿಗಾಗಿ ಯೋಗ-ಪುನಶ್ಚೇತನ ಶಿಬಿರ”

ಕಿನ್ನಿಗೋಳಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದ ಸರ್ವೋತೋಮುಖ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಯೋಗ ಅತ್ಯವ್ಯಶ. ಬಾಲ್ಯದಿಂದಲೇ ಮಕ್ಕಳಿಗೆ ಯೋಗಾಸನ ಕಲಿಸುವುದರಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕವಾಗಿ ಶಕ್ತಿ ಹೆಚ್ಚುತ್ತದೆ, ಇದರಿಂದ ಸೃಜನಶೀಲತೆ ಬೆಳೆಯುತ್ತದೆ ಎಂದು ಯುಗಪರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.

ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ “ಭವಿಷ್ಯತ್ತಿಗಾಗಿ ಯೋಗ-2013 ಪುನಶ್ಚೇತನ ಶಿಬಿರ” ಉದ್ಘಾಟಿಸಿ ಮಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಯ ಕಾರ್ಯದರ್ಶಿ ಕೆ. ಎಚ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ದೇಶಕ ಶಶಿಕಾಂತ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಲಾನ್ಸಿ ಸಿಕ್ವೇರಾ. ಯೋಗ ಶಿಕ್ಷಕ ಮೋಹನ್ ಕುಂಬ್ಳೇಕರ್ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಹರಿರಾಜ್ ಕುಜಿಂಗಿರಿ ವಂದಿಸಿದರು. ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.

Kinnigoli-03071303

Comments

comments

Leave a Reply

Read previous post:
Kinnigoli-03071302
ಕಟೀಲು ಪ್ರೌಢ ಶಾಲೆ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

ಕಿನ್ನಿಗೋಳಿ: ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸರಕಾರದ ಶಿಕ್ಷಣ ಯೋಜನೆಗಳು ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಮೌಲ್ಯಾಧರಿತ ಶಿಕ್ಷಣ ದೊರೆಯುತ್ತದೆ. ಎಂದು ಕಟೀಲು ದೇವಳ...

Close