ಕೆಮ್ರಾಲ್ ಶಾಲೆ : ವಿವಿಧ ಸಂಘಗಳ ಉದ್ಘಾಟನೆ.

ಕಿನ್ನಿಗೋಳಿ: ಕಲಿಕೆಗೆ ಮಹತ್ವ ಕೊಟ್ಟಂತೆ ಪಾಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಒಳ್ಳೆಯ ಗುಣ ನಡತೆ, ಸಹಕಾರ ಮನೋಭಾವ ಹಾಗೂ ಸೌಹಾರ್ದತೆಯನ್ನು ಬೆಳೆಸಿ ಕೊಳ್ಳಬೇಕು ಎಂದು ದ.ಕ.ಜಿಲ್ಲಾ ಹಿ.ಪ್ರಾ. ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಕೆ. ರವಿರಾಜ್ ಶೆಟ್ಟಿ ಹೇಳಿದರು.
ಸೋಮವಾರ ಕೆಮ್ರಾಲ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್.ಹೆಗ್ಡೆ ಶಾಲಾ ಸಂಸತ್ತು ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು. ವಿವಿಧ ಸಂಘಗಳ ಕಾರ್ಯಚಟುವಟಿಕೆ ಹಾಗೂ ವೈಖರಿಯ ಬಗ್ಗೆ ಕೆ.ಎಂ.ರಾಮಚಂದ್ರ ವಿವರಣೆ ನೀಡಿದರು.
ಸಹಶಿಕ್ಷಕಿ ಮಥುರಾ ಸ್ವಾಗತಿಸಿ ರಾಘವೇಂದ್ರ ರಾವ್ ವಂದಿಸಿದರು, ಶಾರದಾ ಕಾರ್ಯಕ್ರಮ ನಿರೂಪಿಸಿದರು.

Kinnigoli-05071304

Comments

comments

Leave a Reply

Read previous post:
Kinnigoli-05071303
ಧ.ಗ್ರಾ.ಯೋಜನೆ: ಮಾಸಾಶನ ಹಸ್ತಾಂತರ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುವ ನಿರ್ಗತಿಕರ ಮಾಸಾಶನವನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರಿನ ಯಮುನಾ ಅವರಿಗೆ ಸೋಮವಾರ ಕಿನ್ನಿಗೋಳಿ ಸೇವಾನಿರತರ ಕಛೇರಿಯಲ್ಲಿ...

Close