ನೈತಿಕತೆಯ ಶಿಕ್ಷಣ ಮುಖ್ಯ : ಭಗಿನಿ ಕಾಮ್‌ಲಿಟಾB.S

ಕಿನ್ನಿಗೋಳಿ: ಮಕ್ಕಳು ಶಾಲೆಯಲ್ಲಿ ಕಲಿತ ಪಠ್ಯದ ಜತೆಗೆ ಸಂಸ್ಕಾರಯುತ ಹಾಗೂ ಜೀವನ ಮೌಲ್ಯದ ನೈತಿಕತೆಯ ಶಿಕ್ಷಣ ಪಡೆಯಬೇಕಾದರೆ ಶಿಕ್ಷಕರಿಗಿಂತ ಹೆತ್ತವರ ಹೊಣೆಗಾರಿಕೆ ಅತೀ ಮುಖ್ಯವಾಗಿದೆ. ಮೊಗ್ಗಿನಂತಹ ಮನಸ್ಸಿನ ಮಕ್ಕಳನ್ನು ತಿದ್ದಿ ತೀಡುವುದು ಹೆತ್ತವರ ಆದ್ಯ ಕರ್ತವ್ಯವಾಗಿದೆ. ಧನಾತ್ಮಕ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸಬೇಕು. ಎಂದು ಮನಶಾಸ್ತ್ರಜ್ಞೆ ಭಗಿನಿ ಕಾಮ್‌ಲಿಟಾ ಬಿ ಎಸ್. ಹೇಳಿದರು.
ಕಿನ್ನಿಗೋಳಿ ಮೇರಿವೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಮೇರಿವೆಲ್ ಶಾಲಾ ಸಂಚಾಲಕಿ ಭಗಿನಿ ರೋಸ್‌ಲಿಟಾ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಮಾಲತಿ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿನಿಗಳಾದ ಮಲಿಶಾ ರೋಡ್ರಿಗಸ್, ದೀಕ್ಷಾ ಹಾಗೂ ಶೈನಿ ಮಸ್ಕರೇನ್ಹಸ್ ಅವರನ್ನು ಅಭಿನಂದಿಸಲಾಯಿತು.
ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ್ ಬಿ.ಎಸ್., ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಜೆಸಿಂತಾ ಡಿಸೋಜ ಬಿ.ಎಸ್., ಶಿಕ್ಷಕ ರಕ್ಷಕ ಸಂಘದ ಮಾಜಿ ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಖಜಾಂಜಿ ಹೆಲೆನ್ ಮಥಾಯಸ್ ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ಸ್ವಾಗತಿಸಿದರು. ಭಗಿನಿ ಪ್ರಮೀಳಾ ಬಿ.ಎಸ್ ವಂದಿಸಿದರು. ಲೋನಾ ಡಿಸೋಜಾ ಹಾಗೂ ವೀಣಾ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-05071306

Comments

comments

Leave a Reply

Read previous post:
Kinnigoli-05071305
ಮೆನ್ನಬೆಟ್ಟು ತರಕಾರಿ ಬೀಜ ವಿತರಣೆ

ಕಿನ್ನಿಗೋಳಿ: ಕರ್ಣಾಟಕ ಸರಕಾರ ಜಲಾನಯನ ಇಲಾಖಾ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಹೈಬ್ರಿಡ್ ತಳಿಯ ತರಕಾರಿ ಬೀಜಗಳನ್ನು ಗುರುವಾರ ಮೆನ್ನಬೆಟ್ಟು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ...

Close