ನಶಿಸುತ್ತಿರುವ ಭತ್ತ ಕೃಷಿಗೆ ಶ್ರೀಪಧ್ಧತಿ ಆಧಾರ

ಕಿನ್ನಿಗೋಳಿ: ಆಧುನಿಕ ಯುಗದಲ್ಲಿ ಭತ್ತದ ಗದ್ದೆಗಳು ವಾಣಿಜ್ಯೀಕರಣವಾಗುತ್ತಿದ್ದು ರೈತರು ಭತ್ತದ ಕೃಷಿಯನ್ನು ಬಿಟ್ಟು ಪಟ್ಟಣದ ಭೋಗ ಜೀವನಕ್ಕೆ ಅಣಿಯಾಗುತ್ತಿರುವುದು ಶೋಚನೀಯ. ಇದಕ್ಕೆ ಪರ್ಯಾಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಪ್ರಾರಂಭಿಸಿದ ಶ್ರೀಪದ್ಧತಿ ಭತ್ತದ ಕೃಷಿ ವಿಧಾನ ಗ್ರಾಮೀಣ ಬದುಕಿನ ಆಧಾರ ಶಕ್ತಿಯಾಗಿದೆ. ಆಹಾರ ಧಾನ್ಯಗಳಲ್ಲಿ ಭತ್ತಕ್ಕೆ ಮಹತ್ತವಾದ ಸ್ಥಾನವನ್ನು ನೀಡಲಾಗುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಶ್ರೀ ಪದ್ಧತಿ ಭತ್ತದ ಕೃಷಿಯನ್ನು ರೈತರು ಅಳವಡಿಸಬೇಕೆಂದು ಕಿನ್ನಿಗೋಳಿ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ವೈ. ಯೋಗೀಶ್ ರಾವ್ ಹೇಳಿದರು.
ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಐಕಳ ಪಟ್ಟೆ ಭಂಡಾರ ಮನೆ ಜಿನ್ನಮ್ಮ ಪೂಜಾರ‍್ತಿಯವರ ಕೃಷಿ ತಾಕುವಿನಲ್ಲಿ ಆಯೋಜಿಸಿದ ಶ್ರೀ ಪದ್ಧತಿ ಭತ್ತದ ಬೇಸಾಯದ ತರಬೇತಿ ಮತ್ತು ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತಾನಾಡಿದರು.
ಕಿನ್ನಿಗೋಳಿ ವಲಯ ಮೇಲ್ವಿಚಾರಕ ಗಣೇಶ್ ಪ್ರಸ್ತಾವನೆಗೈದರು. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಭತ್ತದ ಕೃಷಿಯನ್ನು ರೈತರು ಮುಂದುವರಿಸುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನದಲ್ಲಿರುವ ರಾಜ್ಯದ ೨೨ ಜಿಲ್ಲೆಗಳಲ್ಲಿಯೂ ಶ್ರೀಪದ್ಧತಿ ಭತ್ತದ ಬೇಸಾಯಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ಮಂಗಳೂರು ತಾಲೂಕು ಧ.ಗ್ರಾ ಯೋಜನಾಧಿಕಾರಿ ರಾಘವ .ಎಮ್ ಹೇಳಿದರು.
ಐಕಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪದ್ಧತಿ ಭತ್ತದ ಬೇಸಾಯದ ಉಗಮ, ಯೋಜನೆಯ ಪ್ರೋತ್ಸಾಹ, ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿತಯಾರಿ, ನಾಟಿಗದ್ದೆ ತಯಾರಿ, ಸಸಿಗಳ ನಾಟಿ ವಿಧಾನ, ಕಳೆ ನಿರ್ವಹಣೆ, ಗೊಬ್ಬರ ಒದಗಣೆ, ನೀರು ನಿರ್ವಹಣೆ, ಕೀಟರೋಗ ನಿರ್ವಹಣೆ, ಇಳುವರಿ, ಕೊಲು ಮತ್ತು ಆದಾಯದ ಬಗ್ಗೆ ಸಂಪನ್ಮೂಲ ವ್ಯಕ್ತಿ ಕೃಷಿ ಅಧಿಕಾರಿ ಜನಾರ್ಧನ ಎಮ್ ಮಾಹಿತಿ ಹಾಗೂ ತರಬೇತಿ ನೀಡಿದರು. ಶ್ರೀ ಪದ್ಧತಿಯ ಪ್ರಾತ್ಯಕ್ಷತೆಯನ್ನು ನಡೆಸಲಾಯಿತು.
ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಅರ್ಚಕ ಉಜ್ಜು ಪೂಜಾರಿ, ಜಿನ್ನಮ್ಮ ಪೂಜಾರ‍್ತಿ, ಏಳಿಂಜೆ ಒಕ್ಕೂಟ ಅಧ್ಯಕ್ಷ ಕರುಣಾಕರ ಶೆಟ್ಟಿ, ಸುಧಾಕರ್ ಸಾಲಿಯಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮನಿ ವಸಂತ್, ಸೇವಾಪ್ರತಿನಿಧಿಗಳಾದ ಗೀತಾ, ಶ್ರೀಕಲಾ ಉಪಸ್ಥಿತರಿದ್ದರು.
ಲೀಲಾಪ್ರಸನ್ನ ಸ್ವಾಗತಿಸಿ ಉಷಾ ಜೆ ವಂದಿಸಿದರು. ಮೆನ್ನಬೆಟ್ಟು ಸೇವಾನಿರತ ದೇವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Kinnigoli-05071301

Comments

comments

Leave a Reply

Read previous post:
Kinnigoli-03071304
ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಇತರರ ಒಳಿತಿಗಾಗಿ ಬದುಕುವುದೇ ಜೀವನ ಕಲೆ. ಸಮಾಜದಲ್ಲಿರುವ ಬಡವರು, ದೀನದಲಿತರ ಶ್ರೇಯೋಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ನೀಡುವಲ್ಲಿ ರೋಟರಿ sಸದಸ್ಯರು ಶ್ರಮಿಸಬೇಕು ಎಂದು 2015-16...

Close