ಪತ್ರಕರ್ತ ಅವಸರದ ಸಾಹಿತಿ; ಕೆ.ಎಲ್.ಕುಂಡಂತಾಯ

Narendra Kerekad, Reshma Studio

ಮೂಲ್ಕಿ: ಸಂಸ್ಕೃತಿ, ಜನಜೀವನವನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಳ್ಳುವ ಕೆಲಸವನ್ನು ಸುದ್ದಿ ಪತ್ರಿಕೆಗಳು ಮಾಡುತ್ತಿದೆ, ಮುದ್ರಣ ಮಾದ್ಯಮವು ಅಳಿಯುವುದಿಲ್ಲ ಅಂತರ್ಜಾಲ ರೂಪದಲ್ಲಾದರು ನಮ್ಮಲ್ಲಿ ಉಳಿಯುತ್ತದೆ. ಅವರಸರದ ಸಾಹಿತಿಯಾಗಿರುವ ಪತ್ರಕರ್ತ ತನ್ನ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಜಾತಿ ಸಂಘಟನೆಯಿಂದ ದೂರವಿರಬೇಕು ಪರಿಸರದ ಅನಿವಾರ್ಯತೆಯ ಒತ್ತಡದ ಜೀವನದಲ್ಲಿ ವಸ್ತು ನಿಷ್ಠೆ ಪ್ರಾಮಾಣಿಕತೆಗೆ ಎಂದಿಗೂ ಬೆಲೆಯಿದೆ ಎಂದು ಹಿರಿಯ ಅಂಕಣಕಾರ, ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಹೇಳಿದರು.
ಮೂಲ್ಕಿ ವಲಯ ಪತ್ರಕರ್ತರ ಸಂಘದ ಸಂಯೋಜನೆಯಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್‌ನಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ವಿಶೇಷವಾಗಿ ಸನ್ಮಾನವನ್ನು ಸ್ವೀಕರಿಸಿ ಮಾದ್ಯಮ ಅಂದು-ಇಂದು-ಸವಾಲುಗಳು ಎಂಬ ವಿಷಯದಲ್ಲಿ ಸಂವಾದ ನಡೆಸಿ ಮಾತನಾಡಿದರು.
ಬ್ರೇಕಿಂಗ್ ನ್ಯೂಸ್‌ನ ದಾವಂತದಲ್ಲಿರುವ ಪತ್ರಕರ್ತರು ಸುದ್ದಿಯನ್ನು ವೈಭವೀಕರಿಸದೇ ಸಾಮಾಜಿಕ ಜವಬ್ದಾರಿಯೊಂದಿಗೆ ವರದಿ ಮಾಡಿದಲ್ಲಿ ಸಮಾಜದ ಸ್ವಾಸ್ಥ್ಯವೂ ಕೆಡುವುದಿಲ್ಲ, ಜಾಹಿರಾತುಗಳೇ ಇಂದಿನ ಮಾದ್ಯಮದ ಮೂಲ ಮಂತ್ರವಾಗುತ್ತಿದ್ದು, ಗ್ರಾಮೀಣ ಭಾಗದ ಚಿತ್ರಣ ವಲಯ ಮಟ್ಟದಲ್ಲಿ ಮಾತ್ರ ಸೀಮಿತಗೊಂಡು ಸುದ್ದಿಯ ನೈಜತೆ ಕ್ಷಿಣಿಸುತ್ತಿದೆ ಎಂದು ಹೇಳಿದರು.
ಕ.ಸಾ.ಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ಯ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಡುಬಿದ್ರಿ, ಸ್ಥಾಪಕ ಅಧ್ಯಕ್ಷ ಸರ್ವೋತ್ತಮ ಅಂಚನ್, ಮಾಜಿ ಅಧ್ಯಕ್ಷರಾದ ಶರತ್ ಶೆಟ್ಟಿ ಕಿನ್ನಿಗೋಳಿ, ಹೆಚ್ಕೆ ಹೆಜ್ಮಾಡಿ, ರಘುನಾಥ ಕಾಮತ್ ಕೆಂಚನಕೆರೆ, ನರೇಂದ್ರ ಕೆರೆಕಾಡು ಹಾಜರಿದ್ದರು.

Kinnigoli-05071307

Comments

comments

Leave a Reply

Read previous post:
Kinnigoli-05071306
ನೈತಿಕತೆಯ ಶಿಕ್ಷಣ ಮುಖ್ಯ : ಭಗಿನಿ ಕಾಮ್‌ಲಿಟಾB.S

ಕಿನ್ನಿಗೋಳಿ: ಮಕ್ಕಳು ಶಾಲೆಯಲ್ಲಿ ಕಲಿತ ಪಠ್ಯದ ಜತೆಗೆ ಸಂಸ್ಕಾರಯುತ ಹಾಗೂ ಜೀವನ ಮೌಲ್ಯದ ನೈತಿಕತೆಯ ಶಿಕ್ಷಣ ಪಡೆಯಬೇಕಾದರೆ ಶಿಕ್ಷಕರಿಗಿಂತ ಹೆತ್ತವರ ಹೊಣೆಗಾರಿಕೆ ಅತೀ ಮುಖ್ಯವಾಗಿದೆ. ಮೊಗ್ಗಿನಂತಹ ಮನಸ್ಸಿನ ಮಕ್ಕಳನ್ನು...

Close