ಜಲಾನಯನ ಇಲಾಖೆಯಿಂದ ಸಸಿ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ, ಎಳತ್ತೂರು ಗ್ರಾಮಗಳಲ್ಲಿ ಜಲಾನಯನ ಇಲಾಖೆಯಿಂದ ಸುಮಾರು 80 ಲಕ್ಷ ರೂ.ನಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ ಘಟಕ ನಿರ್ವಹಣಾ ಯೋಜನೆ ರೂಪಿಸಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳ್ಳಲಿದ್ದು ಪ್ರಥಮ ಹಂತವಾಗಿ ಇಪ್ಪತ್ತೆರಡು ಸಾವಿರ ಗಿಡಗಳನ್ನು ಕಿನ್ನಿಗೋಳಿ ಪಂಚಾಯಿತಿಯ ಕೃಷಿಕರಿಗೆ ಶನಿವಾರ ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಲಾಯಿತು.
ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಿನ್ನಿಗೋಳಿ, ಮೆನ್ನಬೆಟ್ಟು, ಕೆಮ್ರಾಲ್, ಕಿಲ್ಪಾಡಿ, ಎಕ್ಕಾರು ಮತ್ತು ಮುಚ್ಚೂರು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಗಿಡಗಳನ್ನು ಕೃಷಿಕರಿಗೆ ವಿತರಿಸಲಾಗುವುದು. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಯೋಗ್ಯವಲ್ಲದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವುದು ಸ್ಥಳೀಯ ಸಂಘಟನೆಗಳ ಬಲವರ್ಧನೆ, ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು. ಆರು ಗ್ರಾಮ ಪಂಚಾಯಿತಿಗಳ ಭೌಗೋಳಿಕ ವಿಸ್ತೀರ್ಣ 6626.94 ಹೆಕ್ಟೇರು ಇದ್ದು 4157.98 ಹೆಕ್ಟೇರು ಪ್ರದೇಶವು ಉಪಚರಿಸಲು ಲಭ್ಯ ವಿದ್ದು ಇದನ್ನು ಹಂತ ಹಂತವಾಗಿ ಅನುಷ್ಟಾನ ಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಸುಮಾರು 60% ಶೇಕಡ ಗ್ರಾಮ ಪಂಚಾಯಿತಿ ಅಭಿವೃದ್ಧಿಗೋಸ್ಕರ ಹಾಗೂ 40% ಆಡಳಿತ ವೆಚ್ಚ ಹಾಗೂ ರೈತರ ಆದಾಯ ಉತ್ಪನ್ನ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿಗಳನ್ನು ನೀಡಲಾಗುವುದು ಎಂದು ಜಲಾನಯನ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ವಸಂತ ಎಸ್. ಕುಲಕರ್ಣಿ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂದ, ಮಂಗಳೂರು ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಕೆ.ಜಿ.ಯುವರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜ್ ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿ’ಸೋಜ, ಕಾರ್ಯದರ್ಶಿ ಓಸ್ವಾಲ್ಡ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-06071301

Comments

comments

Leave a Reply

Read previous post:
Kinnigoli-05071307
ಪತ್ರಕರ್ತ ಅವಸರದ ಸಾಹಿತಿ; ಕೆ.ಎಲ್.ಕುಂಡಂತಾಯ

Narendra Kerekad, Reshma Studio ಮೂಲ್ಕಿ: ಸಂಸ್ಕೃತಿ, ಜನಜೀವನವನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಳ್ಳುವ ಕೆಲಸವನ್ನು ಸುದ್ದಿ ಪತ್ರಿಕೆಗಳು ಮಾಡುತ್ತಿದೆ, ಮುದ್ರಣ ಮಾದ್ಯಮವು ಅಳಿಯುವುದಿಲ್ಲ ಅಂತರ್ಜಾಲ ರೂಪದಲ್ಲಾದರು ನಮ್ಮಲ್ಲಿ ಉಳಿಯುತ್ತದೆ....

Close