ಐಕಳ ಪೊಂಪೈ ಕಾಲೇಜು,ಸಂಸ್ಥಾಪಕರ ದಿನಾಚರಣೆ,

ಕಿನ್ನಿಗೋಳಿ: ಉತ್ತಮ ಗುಣಮಟ್ಟ ಮತ್ತು ಉತ್ಕೃಷ್ಟತೆ ಇಂದಿನ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ತಮ್ಮ ಗುರಿ ತಲುಪಲು ಅತ್ಯಂತ ಶ್ರಮ ವಹಿಸಬೇಕು ಎಂದು ಶಿರ್ವಾ ಸೈಂಟ್ ಮೇರಿಸ್ ಕಾಲೇಜು ಪ್ರಿನ್ಸಿಪಾಲ್ ಪ್ರೋ.ರಾಜನ್ ಹೇಳಿದರು.
ಐಕಳ ಪೊಂಪೈ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂಸ್ಥಾಪಕರ ದಿನಾಚರಣೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ದಿನಾಚರಣೆ ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ 2013-14ನೇ ಸಾಲಿನ ಹಲವು ಕ್ಲಬ್‌ಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ದೂರ ದೃಷ್ಟಿ ಮತ್ತು ಶಿಸ್ತಿನ ಸಿಪಾಯಿ ಎನಿಸಿಕೊಂಡ ದಿವಂಗತ ರೆ.ಫಾ.ಬರ್ನಾರ್ಡ್ ಡಿಸೋಜಾ ರವರ ಭಾವಚಿತ್ರಕ್ಕೆ ಪುಷ್ಪದಳಗಳನ್ನು ಸಮರ್ಪಿಸಿ ನಮನ ಸಲ್ಲಿಸಲಾಯಿತು. ಕಾಲೇಜು ಸಂಚಾಲಕ ರೆ.ಫಾ. ಪೌಲ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಪ್ರಿನ್ಸಿಪಾಲ್ ಡಾ| ಜೆ.ಕ್ಲಾರೆನ್ಸ್ ಮಿರಾಂದ, ಎನ್.ಸಿ.ಸಿ ಅಧಿಕಾರಿ ಸಬ್.ಲೆ| ಪುರುಷೋತ್ತಮ ಕೆ.ವಿ ಮತ್ತು ಎನ್.ಎಸ್.ಎಸ್ ಅಧಿಕಾರಿ ಡಾ| ಗುಣಕರ್, ಪ್ರೋ| ಥಾಮಸ್ ಜಿ.ಎಂ. ಉಪಸ್ಥಿತರಿದ್ದರು.
ಡಾ| ವಿಕ್ಟರ್ ವಾಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06071302

Comments

comments

Leave a Reply

Read previous post:
Kinnigoli-06071301
ಜಲಾನಯನ ಇಲಾಖೆಯಿಂದ ಸಸಿ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ, ಎಳತ್ತೂರು ಗ್ರಾಮಗಳಲ್ಲಿ ಜಲಾನಯನ ಇಲಾಖೆಯಿಂದ ಸುಮಾರು 80 ಲಕ್ಷ ರೂ.ನಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ ಘಟಕ ನಿರ್ವಹಣಾ ಯೋಜನೆ ರೂಪಿಸಲಾಗಿದ್ದು,...

Close