ಕೆಮ್ರಾಲ್ ಮನೆ ಕುಸಿತ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ಪಿ.ಎಂ. ಹಸನಬ್ಬ ಎಂಬವರಿಗೆ ಸೇರಿದ (ಬದ್ರಿಯಾ ಮಂಜಿಲ್) ಮನೆ ಭಾನುವಾರ ಸಂಜೆ ಸುಮಾರು 3.30ಕ್ಕೆ ಬಿರುಗಾಳಿಗೆ ಕುಸಿದು ಬಿದ್ದಿದೆ.

ಮನೆಯ ಅರ್ಧ ಭಾಗ ಛಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು ಮುಂದಿನ ಬಾಗಿಲು ಮುರಿದು ಬಿದ್ದಿದೆ. ಸುಮಾರು ರೂ. ಒಂದು ಲಕ್ಷದಷ್ಟು ನಷ್ಟ ಸಂಭವಿಸಿದೆ. ಮನೆಯಲ್ಲಿದ್ದ ಇಬ್ಬರು ಸಣ್ಣ ಮಕ್ಕಳು ಹಾಗೂ ನಾಲ್ಕು ಮಂದಿ ವಯಸ್ಕರು ಮನೆಯೊಳಗಿದ್ದು ಪವಾಡ ಸೃದಶವಾಗಿ ಪಾರಾಗಿದ್ದಾರೆ. ಕೂಲಿ ಕಾರ್ಮಿಕರಾದ ಮನೆ ಮಾಲೀಕ ಪಿ.ಎಂ. ಹಸನಬ್ಬ ಭುಜಕ್ಕೆ ಸ್ವಲ್ಪ ಗಾಯಾವಾಗಿದೆ. ಮನೆ ಕುಸಿತದಿಂದ ಮನೆಯವರು ನಿರಾಶ್ರಿತರಾಗಿದ್ದಾರೆ.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಹಾಗೂ ಪಂಚಾಯಿತಿ ಸದಸ್ಯ ಮಯ್ಯದ್ದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Kinnigoli-07071301

Kinnigoli-07071302

 

Comments

comments

Leave a Reply

Read previous post:
Kinnigoli-06071302
ಐಕಳ ಪೊಂಪೈ ಕಾಲೇಜು,ಸಂಸ್ಥಾಪಕರ ದಿನಾಚರಣೆ,

ಕಿನ್ನಿಗೋಳಿ: ಉತ್ತಮ ಗುಣಮಟ್ಟ ಮತ್ತು ಉತ್ಕೃಷ್ಟತೆ ಇಂದಿನ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ತಮ್ಮ ಗುರಿ ತಲುಪಲು ಅತ್ಯಂತ ಶ್ರಮ ವಹಿಸಬೇಕು ಎಂದು ಶಿರ್ವಾ ಸೈಂಟ್ ಮೇರಿಸ್ ಕಾಲೇಜು ಪ್ರಿನ್ಸಿಪಾಲ್ ಪ್ರೋ.ರಾಜನ್...

Close