ಉಲ್ಲಂಜೆ ಯಕ್ಷಗಾನ, ಯೋಗ, ತರಗತಿಗಳ ಉದ್ಘಾಟನೆ

ಕಿನ್ನಿಗೋಳಿ: ಪ್ರಬಲ ಮನೋಸ್ಥೈರ್ಯವಿದ್ದರೆ ಕಲಿಕೆಯಲ್ಲಿ ಉತ್ತಮ ಸಾಧನೆ ಹೊಂದಬಹುದು. ಲಲಿತಕಲೆ ಹಾಗೂ ಯೋಗ ಶಿಕ್ಷಣದಂತಹ ಅಭ್ಯಾಸದಿಂದ ಶಾಲೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಸಿಗುವುದು. ಎಂದು ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಅನಂತ ಪ್ರಕಾಶದ ಸಹಯೋಗದೊಂದಿಗೆ ಸೋಮವಾರ ಉಲ್ಲಂಜೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಯಕ್ಷಗಾನ, ಯೋಗ, ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಶಾಲಾ ಮಕ್ಕಳಿಗೆ ಐಡಿ ಕಾರ್ಡು, ಉಚಿತ ಸಸಿಗಳು ಹಾಗೂ ಶಾಲಾ ಮಕ್ಕಳಿಗೆ ಸರಕಾರದಿಂದ ನೀಡುವ ಶಾಲಾ ಸಮವಸ್ತ್ರಗಳನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ವಿತರಿಸಿದರು.
ಯೋಗ ಮತ್ತು ಯಕ್ಷಗಾನ ಶಿಕ್ಷಕ ಹರಿರಾಜ್ ಕುಜಿಂಗಿರಿ, ಮೋಹಿನಿ ಕಲಾ ಸಂಪದ ಸಂಸ್ಥೆಯ ಗಂಗಾಧರ ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿಯ ದಯಾನಂದ್ ಶೆಟ್ಟಿ, ಸಹ ಶಿಕ್ಷಕಿಯರಾದ ರತ್ನಾವತಿ, ಜಯಶ್ರೀ, ಜ್ಯೋತಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್ ಸ್ವಾಗತಿಸಿದರು. ಶಿಕ್ಷಕಿ ಸರೋಫಿ ಜ್ಯೂಲಿಯಟ್ ವಂದಿಸಿದರು. ಶಿಕ್ಷಕಿ ಜೆಸಿಂತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli-08071303

Kinnigoli-08071304

Kinnigoli-08071305

Comments

comments

Leave a Reply

Read previous post:
Kinnigoli-08071302
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ

Mithuna Kodethooru ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದ ಸಲುವಾಗಿ ಜುಲೈ 20ರ ಶನಿವಾರ ಕಟೀಲು ಸರಸ್ವತೀ ಸದನದಲ್ಲಿ ಅವಿಭಜಿತ ದ.ಕ....

Close