ಐಕಳ ಪಂಚಾಯಿತಿ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿಯ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಮಂಗಳವಾರ ಕಿರೆಂ ಚರ್ಚ್ ಮಿನಿಹಾಲ್‌ನಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಸ್ಥರ ಅನುಪಸ್ಥಿತಿ ಎದ್ದು ತೋರುತ್ತಿತ್ತು. ಐಕಳ ಪಂಚಾಯಿತಿಯು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿಕೊಂಡರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನತೆಗೆ ಉದ್ಯೋಗ ದೊರಕಿಸುವುದರೊಂದಿಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ. ಜಲ ಸಂರಕ್ಷಣೆ, ಗ್ರಾಮಗಳ ಸಬಲೀಕರಣ ಮುಖ್ಯ ಉದ್ದೇಶವಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆಯಲ್ಲಿನ ಕಾಮಗಾರಿಗಳಾದ ಕಾಂಪೋಸ್ಟ್ ಗುಂಡಿ, ಎರೆಹುಳು ಗೊಬ್ಬರ ಘಟಕಗಳ ನಿರ್ಮಾಣ, ದ್ರವ ರೂಪದ ಜೈವಿಕ ಗೊಬ್ಬರ ಘಟಕ, ಜೈವಿಕ ಇಂಧನ, ತಡೆಗೋಡೆ ನಿರ್ಮಾಣ, ಬಾವಿ, ಕೆರೆ ಕಾಲುವೆ ನಿರ್ಮಾಣ, ಭೂಮಿ ಸಮತಟ್ಟು ಹಾಗೂ ಇನ್ನಿತರ ಕೃಷಿ ಸಂಬಂಧ ಕೆಲಸಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಗೂಲಿ 174 ನೀಡಲಾಗುತ್ತಿದೆ ಎಂದು ತಾಲೂಕು ಲೆಕ್ಕ ಪರಿಶೋಧನೆ ಸಂಯೋಜಕ ರಾಜು ಸಾಲ್ಯಾನ್ ಪೂರಕ ಮಾಹಿತಿ ನೀಡಿದರು.

ಐಕಳ ಪಂಚಾಯಿತಿಯಲ್ಲಿ ಒಟ್ಟು 1159 ಕುಟುಂಬಗಳು ಇದ್ದು 561 ಬಿಪಿಎಲ್, 598 ಎಪಿಎಲ್ ಕುಟುಂಬಗಳಿವೆ. 149 ಕುಟುಂಬಗಳು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೋಂದಾವಣೆಯಾಗಿದ್ದು 43 ಬಿಪಿಎಲ್ ಹಾಗೂ 66 ಎಪಿಎಲ್ ಕುಟುಂಬಗಳು ಜಾಬ್ ಕಾರ್ಡ್ ಹೊಂದಿವೆ.
ಯೋಜನೆಯ ನಾಲ್ಕು ಕಾಮಾಗಾರಿಗಳಲ್ಲಿ 2 ಪೂರ್ಣಗೊಡಿದ್ದು 2 ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಯಲ್ಲಿ ಸಾಮಾಗ್ರಿಗಾಗಿ 218800ಹಾಗೂ ಕೂಲಿಗಾಗಿ 328200 ಒಟ್ಟು 547000ವೆಚ್ಚವಾಗಿದೆ ಎಂದು ಲೆಕ್ಕಪರಿಶೋಧನೆ ವರದಿಯಲ್ಲಿ ತಿಳಿಸಲಾಯಿತು.
ಸಹಾಯಕ ಕೃಷಿ ಇಲಾಖಾ ಅಧಿಕಾರಿ ಅನೀಸ್ ಸಲ್ಮಾ ಕೆ ನೋಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಐಕಳ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಚೌಟ, ಪಿಡಿಒ ಪ್ರೇಮ್ ಸಿಂಗ್ ಕಾರ್ಯದರ್ಶಿ ರವೀಂದ್ರ ಪೈ, ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ ಸ್ವಾಗತಿಸಿ, ಪದ್ಮ ಪ್ರಭಾಕರ್ ಲೆಕ್ಕಪರಿಶೋಧನೆ ವರದಿ ಮಂಡಿಸಿದರು. ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ವಂದಿಸಿ. ಗ್ರಾಮ ಸಂಪನ್ಮೂಲ ವ್ಯಕ್ತಿ ಕಿಶೋರ್ ಪೈ ಕಾರ್ಯಕ್ರಮ ನಿರೂಪಿಸಿದರು.

Kinnigoli-1071302

Comments

comments

Leave a Reply

Read previous post:
Kinnigoli-1071301
ಕೆಮ್ರಾಲ್: ಬಿರುಗಾಳಿಗೆ ಮನೆ ಕುಸಿತ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ಪಿ.ಎಂ. ಹಸನಬ್ಬ ಎಂಬವರ ಮನೆ ಭಾನುವಾರ ಬಿರುಗಾಳಿಗೆ ಕುಸಿದು ಬಿದ್ದಿದ್ದು ಸ್ಥಳಕ್ಕೆ ಯುವಜನ ಸೇವೆ ಮತ್ತು...

Close