ಕೆಮ್ರಾಲ್: ಬಿರುಗಾಳಿಗೆ ಮನೆ ಕುಸಿತ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ಪಿ.ಎಂ. ಹಸನಬ್ಬ ಎಂಬವರ ಮನೆ ಭಾನುವಾರ ಬಿರುಗಾಳಿಗೆ ಕುಸಿದು ಬಿದ್ದಿದ್ದು ಸ್ಥಳಕ್ಕೆ ಯುವಜನ ಸೇವೆ ಮತ್ತು ಮೀನುಗಾರಿಕ ಸಚಿವ ಅಭಯಚಂದ್ರ ಜೈನ್ ಮನೆಗೆ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ನೀಡಿದರು. ಪಂಚಾಯಿತಿ ಹಾಗೂ ಸರಕಾರ ಮಟ್ಟದಲ್ಲಿ ಹಣ ಮಂಜೂರು ಮಾಡಿಸಿ ಕೊಡುವ ಭರವಸೆಯನ್ನು ನೀಡಿದರು. 
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಉಪಾಧ್ಯಕ್ಷ ರಿಚಾರ್ಡ್ ಡಿಸೋಜ, ಮಯ್ಯದ್ದಿ, ಸುರೇಶ ದೇವಾಡಿಗ, ಬಾಲಾದಿತ್ಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-1071301

Comments

comments

Leave a Reply

Read previous post:
Kinnigoli-08071308
ಕೆಮ್ರಾಲ್ ಮೀನು ಮಾರುಕಟ್ಟೆ ಉದ್ಘಾಟನೆ

ಕಿನ್ನಿಗೋಳಿ: ಸರಕಾರದ ಯೋಜನೆಗಳು, ಅನುದಾನಗಳು ಸಾರ್ಥಕ ಸದ್ಬಳಕೆಯಾಗಬೇಕಾದರೆ ಇಲಾಖೆಗಳ ಮಹತ್ವಾಕಾಂಕ್ಷೆಯ ಚಿಂತನೆ ಹಾಗೂ ಕ್ರಿಯಾತ್ಮಕ ಕಾರ್ಯಸೂಚಿ ಅವಶ್ಯಕತೆಯಿರುತ್ತದೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿದೆ ಎಂದು...

Close