ರೋಟರಿ ಶಾಲೆ ವಿವಿಧ ಸಂಘ ಉದ್ಘಾಟನೆ

ಕಿನ್ನಿಗೋಳಿ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿ ಮೌಲ್ಯಾಧಾರಿತ ಶಿಸ್ತು ಬದ್ಧವಾದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು. ಈ ಗುಣಗಳನ್ನು ಪ್ರಾಥಮಿಕ ಹಂತದಲ್ಲೇ ಬೆಳೆಸಿಕೊಳ್ಳಬೇಕು ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಸಂಘಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೋ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯ ಗಿಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸ್ವರೂಪ್ ಸ್ವಾಗತಿಸಿ ಶಾಲಾ ನಾಯಕ ಅದಿತ್ಯ ಭಟ್ ವಂದಿಸಿದರು, ವಿದ್ಯಾರ್ಥಿನಿ ಮೆಲನಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13061305

Comments

comments

Leave a Reply

Read previous post:
Kinnigoli-13061304
ಕರ್ತವ್ಯ ಪ್ರಜ್ಞೆ ವೃತ್ತಿ ಜೀವನದಲ್ಲಿರಲಿ-ಶೇಖ್ ಹುಸೈನ್

Narendra Kerekadu, Prakash Suvarna ಮೂಲ್ಕಿ: ಜನರ ಹಾಗೂ ಕಾನೂನು ರಕ್ಷಣೆಗೆಂದೇ ಇರುವ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ವೃತ್ತಿ ಜೀವನದಲ್ಲಿ ಕೊನೆಯ ತನಕವು ಮೈಗೂಡಿಸಿಕೊಂಡಲ್ಲಿ ಆತನಿಗೆ ಅರ್ಹತೆಯ...

Close