ಕರ್ತವ್ಯ ಪ್ರಜ್ಞೆ ವೃತ್ತಿ ಜೀವನದಲ್ಲಿರಲಿ-ಶೇಖ್ ಹುಸೈನ್

Narendra Kerekadu, Prakash Suvarna

ಮೂಲ್ಕಿ: ಜನರ ಹಾಗೂ ಕಾನೂನು ರಕ್ಷಣೆಗೆಂದೇ ಇರುವ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ವೃತ್ತಿ ಜೀವನದಲ್ಲಿ ಕೊನೆಯ ತನಕವು ಮೈಗೂಡಿಸಿಕೊಂಡಲ್ಲಿ ಆತನಿಗೆ ಅರ್ಹತೆಯ ಗೌರವ ಸಮಾಜದಿಂದ ಸಿಗುವಂತಾಗುತ್ತದೆ, ಠಾಣೆಯ ಬಾಗಿಲಿಗೆ ನೊಂದು ಬರುವವರಿಗೆ ಸಾಂತ್ವಾನ ಹೇಳುವ ಪ್ರವೃತ್ತಿಗೆ ಮೊದಲ ಆದ್ಯತೆ ನೀಡಿ ಎಂದು ಹಾಸನದ ಹೆಸ್ಕಾಂ ಜಾಗೃತ ದಳದ ಶೇಖ್ ಹುಸೈನ್ ಹೇಳಿದರು.

ಅವರು ಮೂಲ್ಕಿಯ ವೃತ್ತ ನಿರೀಕ್ಷಕರಾಗಿದ್ದು ಹಾಸನದ ಹೆಸ್ಕಾಂಗೆ ವರ್ಗಾವಣೆಗೊಂಡಿದ್ದು ಶುಕ್ರವಾರ ಮೂಲ್ಕಿ ಪೊಲೀಸ್ ಸಿಬ್ಬಂದಿಗಳು ಮೂಲ್ಕಿಯ ಆಧಿಧನ್ ಸಭಾಂಗಣದಲ್ಲಿ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.
ಮೂಲ್ಕಿ ಉಪನಿರೀಕ್ಷಕ ಸೋಮಯ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂಲ್ಕಿ ಠಾಣೆಯ ಎಎಸ್‌ಐ ಮೋಹನ್, ವಾಮನ ಅಡ್ವೆ, ಚಂದ್ರಹಾಸ್, ಉದ್ಯಮಿ ಮನೋಜ್‌ಕುಮಾರ್ ಕೆ.ಎಸ್.ರಾವ್.ನಗರ, ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.

Kinnigoli-13061302

Kinnigoli-13061303

Kinnigoli-13061304

Comments

comments

Leave a Reply

Read previous post:
Kinnigoli-13061301
ಅಂಗರಗುಡ್ಡೆ-ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ: ಶ್ರೀ ರಾಮಭಜನಾ ಮಂಡಳಿ ರಾಮನಗರ ಅಂಗರಗುಡ್ಡೆ ಇದರ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು. ಅಧ್ಯಕ್ಷರಾಗಿ ವಿಜಯ ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸುಧೀರ್...

Close