ಪಾವಂಜೆ ತುಳುನಾಡ ಕೃಷಿ ಜನಪದೋತ್ಸವಕ್ಕೆ ಚಾಲನೆ

Narendra Kerekadu
ಮೂಲ್ಕಿ: ಜಿಲ್ಲೆಯಲ್ಲಿ ಸಂಘಟಿಸುವ ಕೆಸರುಗದ್ದೆ ಕ್ರೀಡೋತ್ಸವವು ಯುವ ಜನತೆಗೆ ಕೃಷಿ ಬದುಕಿನ ಚಿತ್ರಣದ ಪಾಠವಾಗಬೇಕು, ಆ ಮೂಲಕ ಕೃಷಿ ಚಟುವಟಿಕೆ ನಿರಂತವಾಗಿ ನಡೆಸಲು ಆಕರ್ಷಿತರಾಗಲು ಪ್ರೇರಣೆ ಆದಲ್ಲಿ ಭವಿಷ್ಯದಲ್ಲಿ ಕೃಷಿ ಭೂಮಿ ಎಂದಿಗೂ ಅಳಿಯುವುದಿಲ್ಲ ಎಂದು ನಿಟ್ಟೆ ತೋಕೂರು ತಪೋವನದ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವೈ.ಎನ್.ಸಾಲಿಯಾನ್ ಹೇಳಿದರು.
ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆ ಕೆಸರುಗದ್ದೆ ಕ್ರೀಡೋತ್ಸವ ಸಮಿತಿ ಆಶ್ರಯದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಬಾಕಿಮಾರು ಗದ್ದೆಯಲ್ಲಿ ಎರಡು ದಿನಗಳಲ್ಲಿ ನಡೆಯುವ ತುಳುನಾಡ ಕೃಷಿ ಜನಪದೋತ್ಸವದ ಶೈಕ್ಷಣಿಕ ವಿಭಾಗದಲ್ಲಿ ಶನಿವಾರ ಕ್ರೀಡಾ ವಿಜೇತರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಫಲಿತಾಂಶ;
ಕಾಲೇಜು ವಿಭಾಗ; ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಣಿಪಾಲದ ಎ.ಪಿ.ಎಂ.ಸಿ. ಪ್ರಶಸ್ತಿ ಪಡೆದುಕೊಂಡಿತು.
ಹಗ್ಗ ಜಗ್ಗಾಟ, ಹುಡುಗರು; ಸರ್ಕಾರಿ ಕಾಲೇಜು ಕಾಪು (ಪ್ರ), ಎಸ್.ಡಿ.ಪಿ.ಟಿ ಕಟೀಲು (ದ್ವಿ), ಹುಡುಗಿಯರು ಪ್ರಥಮ ಹಾಗೂ ದ್ವಿತೀಯ ಎಸ್.ಡಿ.ಪಿ.ಟಿ ಕಟೀಲು,
ಫ್ರೌಢಶಾಲಾ ವಿಭಾಗ; ಹಗ್ಗಜಗ್ಗಾಟ ಹುಡುಗರು ಎಸ್.ಡಿ.ಪಿ.ಟಿ.ಕಟೀಲು(ಪ್ರ), ರೋಟರಿ ಕಿನ್ನಿಗೋಳಿ(ದ್ವಿ), ಹುಡುಗಿಯರು ಎನ್.ಎಂ.ಪಿ.ಟಿ ಪಣಂಬೂರು (ಪ್ರ), ರೋಟರಿ ಕಿನ್ನಿಗೋಳಿ(ದ್ವಿ).
ಪ್ರಾಥಮಿಕ ವಿಭಾಗ; ಹಗ್ಗಜಗ್ಗಾಟ ಹುಡುಗರು; ರೋಟರಿ ಕಿನ್ನಿಗೋಳಿ(ಪ್ರ), ಯು.ಬಿ.ಎಂ.ಸಿ ಹಳೆಯಂಗಡಿ(ದ್ವಿ). ಹುಡುಗಿಯರು; ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ ಮೂಲ್ಕಿ(ಪ್ರ), ಯು.ಬಿ.ಎಂ.ಸಿ.ಹಳೆಯಂಗಡಿ(ದ್ವಿ).
ಉಳಿದಂತೆ ಕೆಸರುಗದ್ದೆ ಓಟ, ಹಿಮ್ಮಖ ಓಟ, ಪ್ರಬಂಧ ಸ್ಪರ್ಧೆ, ನಿಧಿ ಶೋಧ, ಮೂರು ಕಾಲಿನ ಓಟದ ಸ್ಪರ್ಧೆ, ತುಳು ಪಾಡ್ದನ ಸ್ಪರ್ಧೆಗಳನ್ನು ನಡೆಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ವಿವಿಧ ಸ್ಪರ್ಧೇಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಟೀಲು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ, ಮೂಲ್ಕಿ ವಿಜಯ ಕಾಲೇಜಿನ ಪ್ರೊ.ಕೆ.ಆರ್.ಶಂಕರ್, ಹಳೆಯಂಗಡಿ ಸರ್ಕಾರಿ ಕಾಲೇಜಿನ ಪ್ರೊ.ವಿಶ್ವನಾಥ ಭಟ್, ಶಾಲಾ ಮುಖ್ಯಶಿಕ್ಷಕರಾದ ಕಿಲ್ಪಾಡಿಯ ವ್ಯಾಸ ಮಹರ್ಷಿಯ ಚಂದ್ರಿಕಾ ಭಂಡಾರಿ, ಹಳೆಯಂಗಡಿ ಯು.ಬಿ.ಎಂ.ಸಿಯ ರೇವತಿ, ನಿಡ್ಡೋಡಿ ದುರ್ಗಾದೇವಿ ಶಾಲೆಯ ಪುಷ್ಪಾವತಿ ಇದ್ದರು.
ಬೆಳಿಗ್ಗೆ ಉದ್ಘಾಟನೆಯನ್ನು ಪ್ರಗತಿ ಪರ ಕೃಷಿಕ ಕುಟ್ಟಿ ಕೆ.ಪೂಜಾರಿ ಉದ್ಘಾಟಿಸಿದರು.
ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ, ದುಗ್ಗಣ್ಣ ಸಾವಂತ ಅರಸರು, ಹಳೆಯಂಗಡಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಮಧು, ಉದ್ಯಮಿ ರಘುನಾಥ ಸೋಮಯಾಜಿ, ಶಿಕ್ಷಣ ತಜ್ಞ ಅಡ್ವೆ ರವೀಂದ್ರ ಪೂಜಾರಿ ಹಾಜರಿದ್ದರು.
ಸಮಿತಿಯ ಪಿ.ಪಿ.ಹೆಗ್ಡೆ, ಪ್ರಮೋದ್ ಕುಮಾರ್, ರಾಮಚಂದ್ರ ಶೆಣೈ, ವಿನೋದ್ ಸಾಲ್ಯಾನ್, ಚಂದ್ರಶೇಖರ ನಾನಿಲ್, ವಿನೋದ್‌ಕುಮಾರ್, ಹಿಮಕರ ಕದಿಕೆ, ರಾಮ್‌ದಾಸ್, ಪ್ರವೀಣ್, ಸುಧಾಕರ ಅಮಿನ್, ಸೋಮಶೇಖರ ಶೆಟ್ಟಿ, ಸನತ್‌ಕುಮಾರ್, ಸುನಿಲ್ ಹಳೆಯಂಗಡಿ ಇನ್ನಿತರರು ಇದ್ದರು.

Kinnigoli-15061301

Comments

comments

Leave a Reply

Read previous post:
Kinnigoli-13061305
ರೋಟರಿ ಶಾಲೆ ವಿವಿಧ ಸಂಘ ಉದ್ಘಾಟನೆ

ಕಿನ್ನಿಗೋಳಿ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿ ಮೌಲ್ಯಾಧಾರಿತ ಶಿಸ್ತು ಬದ್ಧವಾದ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು. ಈ ಗುಣಗಳನ್ನು ಪ್ರಾಥಮಿಕ ಹಂತದಲ್ಲೇ ಬೆಳೆಸಿಕೊಳ್ಳಬೇಕು ಎಂದು...

Close