ಪಾವಂಜೆ ಜನಪದೋತ್ಸವ ಸಮಾರೋಪ

Narendra Kerekadu
ಮೂಲ್ಕಿ; ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆ ಕೆಸರುಗದ್ದೆ ಕ್ರೀಡೋತ್ಸವ ಸಮಿತಿ ಆಶ್ರಯದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಬಾಕಿಮಾರು ಗದ್ದೆಯಲ್ಲಿ ಎರಡು ದಿನಗಳಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವದ ಸಾರ್ವಜನಿಕ ವಿಭಾಗದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಓಂ ಫ್ರೆಂಡ್ಸ್ ಪಾವಂಜೆ ಹಾಗೂ ಮಹಿಳೆಯರ ವಿಭಾಗದಲ್ಲಿ ನ್ಯೂ ಜನತಾ ಗೇಮ್ಸ್ ಕ್ಲಬ್ ಬಾಬುಗುಡ್ಡೆ ಪ್ರಶಸ್ತಿಯನ್ನು ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಶ್ರೀ ಕಟೀಲು ಹಾಗೂ ಮಹಿಳೆಯರ ವಿಭಾಗದಲ್ಲಿ ಶಕುಂತಲಾ ಶೆಟ್ಟಿ ತಂಡ ಮದ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪಾವಂಜೆಯ ಫ್ರೆಂಡ್ಸ್ ಪ್ರಶಸ್ತಿ ಪಡೆದುಕೊಂಡಿತು.
ಜಾನಪದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೇ ಕಾಲೇಜು ಹಳೆಯಂಗಡಿ, ದ್ವಿತೀಯ ಡ್ಯಾನ್ಸ್ ಆಫ್ ಆರ್ಟ್ಸ್ ಹಳೆಯಂಗಡಿ ಪಡೆದುಕೊಂಡಿತು.
ಕೆಸರುಗದ್ದೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹರೀಶ್ ಪಡುಪಣಂಬೂರು, ದ್ವಿತೀಯ ಸ್ಥಾನವನ್ನು ಸುನಿಲ್ ಹಳೆಯಂಗಡಿ ಪಡೆದುಕೊಂಡರು.
ಹಿರಿಯ ನಾಗರಿಕರ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಬಾಬಣ್ಣ ಕೊಂಪದವು, ಶಂಭುದೇವಾಡಿಗ ಪಾವಂಜೆ, ಶಕುಂತಲಾ ಶೆಟ್ಟಿ ಮಧ್ಯ, ವಸಂತಿ ದೇವಾಡಿಗ ಪಾವಂಜೆ ಬಹುಮಾನ ಪಡೆದುಕೊಂಡರು.
ದಂಪತಿಗಳ ಓಟದ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸತೀಶ್ ಮತ್ತು ಸ್ವಪ್ನ ಪಕ್ಷಿಕೆರೆ, ದ್ವಿತೀಯ ಸ್ಥಾನವನ್ನು ನಾಗರಾಜ್ ಮತ್ತು ವಿದ್ಯಾ ಹಳೆಯಂಗಡಿ ಪಡೆದುಕೊಂಡರು.
ಉಳಿದಂತೆ ತುಳುಪಾಡ್ದನ, ಕೆಸರುಗದ್ದೆ ಓಟ, ಹಿಮ್ಮಖ ಓಟ, ಮೂರು ಕಾಲಿನ ಓಟ ಪ್ರಬಂಧ ಸ್ಪರ್ಧೆ, ಸ್ಪರ್ಧೆಗಳನ್ನು ನಡೆಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ಒಂದು ಸಾವಿರ ಸಂಖ್ಯೆಯಲ್ಲಿ ಸಾರ್ವಜನಿಕರು ವಿವಿಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಂಬೋಡಿ ಮಹಾಬಲ ಪೂಜಾರಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ಸಚಿವ ಕೆ.ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ, ಕ್ರೆಡಯ್‌ನ ಅಧ್ಯಕ್ಷ ಪುಷ್ಪರಾಜ್ ಜೈನ್, ದ.ಕ.ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ದ.ಕ.ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ರಂಗನಟ ಭೋಜರಾಜ್ ವಾಮಂಜೂರು, ಡಿ.ಸುರೇಂದ್ರ ಕುಮಾರ್ ಧರ್ಮಸ್ಥಳ, ಡಾ.ಗಣೇಶ್ ಅಮಿನ್ ಸಂಕಮಾರ್, ಸಂತೋಷ್‌ಕುಮಾರ್, ಪರಮಾನಂದ ಸಾಲ್ಯಾನ್, ಕೆ.ಎ.ಅಬ್ದುಲ್ ಖಾದರ್, ತಾ.ಪಂ.ಸದಸ್ಯೆ ಸಾವಿತ್ರಿ ಸುವರ್ಣ, ಹಳೆಯಂಗಡಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣೀಮಾ ಹಾಜರಿದ್ದರು.
ಸಮಿತಿಯ ಗೌರವಾಧ್ಯಕ್ಷ ಪಿ.ಪಿ.ಹೆಗ್ಡೆ, ಅಧ್ಯಕ್ಷ ಪ್ರಮೋದ್ ಕುಮಾರ್, ರಾಮಚಂದ್ರ ಶೆಣೈ, ವಿದ್ಯಾಶಂಕರ್ ವಿನೋದ್ ಸಾಲ್ಯಾನ್, ಚಂದ್ರಶೇಖರ ನಾನಿಲ್, ವಿನೋದ್‌ಕುಮಾರ್, ಹಿಮಕರ ಕದಿಕೆ, ರಾಮ್‌ದಾಸ್, ಪ್ರವೀಣ್, ಸುಧಾಕರ ಅಮಿನ್, ಸೋಮಶೇಖರ ಶೆಟ್ಟಿ, ಸನತ್‌ಕುಮಾರ್, ಸುನಿಲ್ ಹಳೆಯಂಗಡಿ ಇನ್ನಿತರರು ಇದ್ದರು.

Kinnigoli-15061302

Kinnigoli-15061303

Comments

comments

Leave a Reply

Read previous post:
Kinnigoli-15061301
ಪಾವಂಜೆ ತುಳುನಾಡ ಕೃಷಿ ಜನಪದೋತ್ಸವಕ್ಕೆ ಚಾಲನೆ

Narendra Kerekadu ಮೂಲ್ಕಿ: ಜಿಲ್ಲೆಯಲ್ಲಿ ಸಂಘಟಿಸುವ ಕೆಸರುಗದ್ದೆ ಕ್ರೀಡೋತ್ಸವವು ಯುವ ಜನತೆಗೆ ಕೃಷಿ ಬದುಕಿನ ಚಿತ್ರಣದ ಪಾಠವಾಗಬೇಕು, ಆ ಮೂಲಕ ಕೃಷಿ ಚಟುವಟಿಕೆ ನಿರಂತವಾಗಿ ನಡೆಸಲು ಆಕರ್ಷಿತರಾಗಲು...

Close