ವೇಗ ನಿಯಂತ್ರಕ ಅಳವಡಿಸಲು ಮನವಿ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಎರಡು ಕಡೆಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸುವಂತೆ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಪೊಂಪೈ ಕಾಲೇಜಿನ ವ್ಯಾಪ್ತಿಯಲ್ಲಿ ಬರುವ ಕಿನ್ನಿಗೋಳಿ-ಮುಂಡ್ಕೂರು-ರಸ್ತೆಯಲ್ಲಿ ಈ ಹಿಂದೆ ವೇಗ ನಿಯಂತ್ರಕವನ್ನು ಅಳವಡಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳ ಹಿಂದೆ ಮರು ಡಾಮರೀಕರಣವಾದ ಸಂದರ್ಭದಲ್ಲಿ ಇದ್ದ ವೇಗ ನಿಯಂತ್ರಕಗಳನ್ನು ತೆಗೆಯಲಾಗಿದೆ. ಸುಮಾರು ಒಂದುವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೊಂಪೈ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ವೇಗ ನಿಯಂತ್ರಕಗಳ ಅಳವಡಿಕೆ ಅತಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಈ ಬಗ್ಗೆ ಮುತುವರ್ಜಿ ವಹಿಸಿ ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಕಛೇರಿ ಸಿಬ್ಬಂದಿ ಸುನಂದ ಇವರ ಮೂಲಕ ಮನವಿಯನ್ನು ನೀಡಿದ್ದಾರೆ. ಈ ಬಗ್ಗೆ ಮಾಜಿ ಅಧ್ಯಕ್ಷ ಯೋಗೀಶ ಕೋಟ್ಯಾನ್ ಈಗಾಗಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿರುವರು. ವಿದ್ಯಾರ್ಥಿಗಳ ನಿಯೋಗದಲ್ಲಿ ಹಾಗೂ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ಪ್ರದೀಪ್ ಫೆರಾವೊ, ಶರತ್ ಶೆಟ್ಟಿ, ಅಮೃತ್ ಶೆಟ್ಟಿ ಹಾಗೂ ಪದವಿ ತರಗತಿಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Kinnigoli-17071302

Comments

comments

Leave a Reply

Read previous post:
Kinnigoli-17071301
ಐಕಳ ಪಠ್ಯ ಪುಸ್ತಕ ವಿತರಣೆ

ಕಿನ್ನಿಗೋಳಿ:  ಐಕಳ ಪೊಂಪೈ ಕಾಲೇಜು ಶಿಕ್ಷಕರ ವಿವಿದ್ದೋದೇಶ ಸಹಕಾರಿ ಸಂಘದ ವತಿಯಿಂದ ಪೊಂಪೈ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕಾಲೇಜು...

Close