ಎನ್ ಸಿ ಸಿ : ಪರಿಸರ ಜಾಗೃತಿ ಕಾಲ್ನಡಿಗೆ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕಾಲ್ನಡಿಗೆ ಇತ್ತೀಚಿಗೆ ಜರಗಿತು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಸಾಹಸ ಮನೋಭಾವ, ನಾಯಕತ್ವ, ಏಕತೆ ಮುಂತಾದ ಮೌಲ್ಯಗಳನ್ನು ಬೆಳೆಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಕಾಲ್ನಡಿಗೆಯು ಬಜಪೆ ಸಮೀಪದ ಅಂತೋಣಿಕಟ್ಟೆಯಿಂದ ಝರಿನಗರ ಮೂಲಕ ಹಳೆ ವಿಮಾನನಿಲ್ದಾಣದ ರಸ್ತೆಯಲ್ಲಿ ಸಾಗಿ ಮುಂದೆ ಆದ್ಯಪಾಡಿ ದೇವಸ್ಥಾನವಾಗಿ ಹೊಸ ವಿಮಾನ ನಿಲ್ದಾಣ ಸಮೀಪ ಕೆಂಜಾರಿನಲ್ಲಿ ಕೊನೆಗೊಂಡಿತು. ಸುಮಾರು ೧೫ ಕಿಲೋ ಮೀಟರ್‌ದೂರದ ಈ ನಡಿಗೆಯಲ್ಲಿ ೧೮ ವಿದ್ಯಾರ್ಥಿನಿಯರು ಹಾಗೂ ೩೫ ಹುಡುಗರು ಪಾಲ್ಗೊಂಡಿದ್ದರು.
ಸದಾ ನಾಡಿನ ಪರಿಸರಕ್ಕೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳು, ಗದ್ದೆಗಳಲ್ಲಿ ನಡೆಯುವ ಕೃಷಿ ಕಾರ್ಯಗಳ ವೈಖರಿಗಳನ್ನು ಕಂಡು ಹಳ್ಳಿ ಪರಿಸರದ ರೈತರ ಕಷ್ಟ ಜೀವನ ಅರಿತುಕೊಂಡರು. ನಿಸರ್ಗದ ಹಸಿರಿನ ಪ್ರಶಾಂತ ಆಹ್ಲಾದಕರ ವಾತಾವರಣ ನೋಡಿ ವಿದ್ಯಾರ್ಥಿಗಳು ಪುಳಕಿತರಾದರು. ಹಳೆ ವಿಮಾನ ನಿಲ್ದಾಣದ ಕೆಳಭಾಗದಲ್ಲಿರುವ ಝರಿನಗರ ಎಂಬಲ್ಲಿ ಮಳೆನೀರು ಅವಲಂಬಿತ ಉಕ್ಕಿ ದುಮ್ಮಿಕ್ಕುತ್ತಿರುವ ಜಲಪಾತದ ಸೌಂದರ್ಯ ಸವಿಯುವ ಅಪೂರ್ವ ಅವಕಾಶವೂ ತಂಡಕ್ಕೆ ಒದಗಿತ್ತು.
ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂಡ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಈ ಜಾಥಾಕ್ಕೆ ಎನ್ ಸಿ ಸಿ ಅಧಿಕಾರಿ ಸಬ್. ಲೆ. ಪುರುಷೋತ್ತಮ ಕೆ.ವಿ. ಇವರು ಸಂಯೋಜಕರಾಗಿದ್ದರು. ರೆಡ್ ರಿಬ್ಬನ್ ಕ್ಲಬ್ ನಿರ್ದೇಶಕ ಪ್ರೊ. ಯೋಗೀಂದ್ರ. ಬಿ, ಉಪನ್ಯಾಸಕರಾದ ಡಾ| ವಿಕ್ಟರ್ ವಾಜ್ ಮತ್ತು ವಿಶ್ವಿತ್ ಶೆಟ್ಟಿ ಭಾಗವಹಿಸಿದ್ದರು. ಎನ್ ಸಿ ಸಿ ಕೆಡೆಟ್ ಕ್ಯಾಪ್ಟನ್ ಚಂದ್ರಶೇಖರ್, ಪಿ.ಒ ಕೆಡೆಟ್‌ಗಳಾದ ಶಾಲೆಟ್ ರೆಬೆಲ್ಲೊ, ಚೈತ್ರಾ, ಕೌಶಿಕ್ ಹಾಗೂ ಪ್ರಹ್ಲಾದ್ ಮುಂದಾಳತ್ವ ವಹಿಸಿದ್ದರು.

Kinnigoli-1807201304

Kinnigoli-1807201305

Comments

comments

Leave a Reply

Read previous post:
Kinnigoli-1807201303
ಪೊಂಪೈ ಕಾಲೇಜಿನಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಗಿಡಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು. ಪೊಂಪೈ...

Close