ಕಿನ್ನಿಗೋಳಿ : ಹಸಿರು ಜಾಗೃತಿ ಜಾಥಾ

ಕಿನ್ನಿಗೋಳಿ: ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಅಧಿಕವಾಗಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಸಿಗಬೇಕಾದರೆ ಪರಿಸರ ಸಂರಕ್ಷಣೆ ಮಾಡುವಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕು. ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೋ ಹೇಳಿದರು.
ಕಿನ್ನಿಗೋಳಿ ಚರ್ಚ್ ಹಾಗೂ ಭಾರತೀಯ ಕೆಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಭಾನುವಾರ ಕಿನ್ನಿಗೋಳಿ ಚರ್ಚ್ ಕಾಂಪ್ಲೆಕ್ಸ್ (ಸಮುಚ್ಚಯ ಕಟ್ಟಡ) ಬಳಿ ನಡೆದ ಹಸಿರು ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಳವೆಯಲ್ಲಿಯೇ ಹಸಿರು ಮೌಲ್ಯಗಳ ಪ್ರಜ್ಞೆ ಬೆಳೆಸುವಲ್ಲಿ ತಿಳಿಹೇಳುವುದು ಹಿರಿಯರ ಕರ್ತವ್ಯ. ಈ ಭೂಮಿಯನ್ನು ಮುಂಬರುವ ಅಪಾಯಗಳಿಂದ ಪಾರು ಮಾಡಲು ಸರ್ಕಾರಗಳ ಮಟ್ಟದಲ್ಲಿ ನಡೆಯುವ ನೀತಿ ನಿಯಮಗಳಿಂದಷ್ಟೇ ಸಾಧ್ಯವಿಲ್ಲ. ನಾಗರೀಕರಲ್ಲಿ ಪರಿಸರಬದ್ಧತೆ ಉಂಟಾಗುವುದು ಅಗತ್ಯ. ಮನುಷ್ಯರ ನಡೆ-ನುಡಿ- ಆಲೋಚನೆಗಳಲ್ಲಿ ಹಸಿರು ಮನೋಭಾವದ ಪ್ರಭಾವಗಳನ್ನು ಕಾಣುವಂತಾಗಬೇಕು. ಎಂದು ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ ಸಸಿ ನೆಟ್ಟು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೋ, ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ, ಭಾರತೀಯ ಕೆಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ಘಟಕದ ಅಧ್ಯಕ್ಷ ಲಾಯ್ಡ್ ಪಿಂಟೊ ಉಪಸ್ಥಿತರಿದ್ದರು.
ಸ್ಮಿತಾ ಡಿಸೋಜ ಸ್ವಾಗತಿಸಿದರು. ಅನಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಿನ್ನಿಗೋಳಿ ಚರ್ಚ್‌ನಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ವರೆಗೆ ಹಸಿರು ಜಾಗೃತಿ ಜಾಥಾ ನಡೆಯಿತು.

Kinnigoli-1807201306

Comments

comments

Leave a Reply

Read previous post:
Kinnigoli-1807201305
ಎನ್ ಸಿ ಸಿ : ಪರಿಸರ ಜಾಗೃತಿ ಕಾಲ್ನಡಿಗೆ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕಾಲ್ನಡಿಗೆ ಇತ್ತೀಚಿಗೆ ಜರಗಿತು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಸಾಹಸ ಮನೋಭಾವ, ನಾಯಕತ್ವ,...

Close