ಪೊಂಪೈ ಕಾಲೇಜಿನಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಗಿಡಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.
ಪೊಂಪೈ ಕಾಲೇಜು ಎನ್ ಸಿ ಸಿ ಹಾಗೂ ಎನ್‌ಎಸ್ ಎಸ್ ವತಿಯಿಂದ ಶನಿವಾರ ಕಾಲೇಜಿನಲ್ಲಿ ನಡೆದ ವನವಹೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ ಕೋಟ್ಯಾನ್ ಗಿಡ ನೆಡುವುದರ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿದರು. ಕಾಲೇಜಿನ ಆವರಣದಲ್ಲಿ ಹಾಗೂ ಕಿರೆಂ ಚರ್ಚಿನ ವಠಾರದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು.
ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಯೋಗೀಂದ್ರ ಬಿ., ಎನ್ ಸಿ ಸಿ ಅಧಿಕಾರಿ ಸಬ್.ಲೆ. ಪುರುಷೋತ್ತಮ ಕೆ.ವಿ. ಹಾಗೂ ಎನ್ ಎಸ್ ಎಸ್ ಅಧಿಕಾರಿ ಡಾ| ಗುಣಕರ, ಪ್ರಾಧ್ಯಾಪಕ ಡಾ| ವಿಕ್ಟರ್ ವಾಜ್, ವಿಶ್ವಿತ್ ಶೆಟ್ಟಿ, ಚಂದ್ರಶೇಖರ್, ಕೌಶಿಕ್, ಶಾಲೆಟ್ ರೆಬೆಲ್ಲೊ, ಚೈತ್ರಾ ಹಾಗೂ ಪ್ರಹ್ಲಾದ್ ಉಪಸ್ಥಿತರಿದ್ದರು.

Kinnigoli-1807201303

Comments

comments

Leave a Reply

Read previous post:
Kinnigoli-1807201302
“ಶಿವಾಂಬು ಕಲ್ಪ” ಮಾಹಿತಿ ಚಿಕಿತ್ಸೆ

ಕಿನ್ನಿಗೋಳಿ: ನಮ್ಮ ಜೀವನ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು, ಸಾಂಪ್ರದಾಯಿಕ ಔಷಧೀಯ ಸಸ್ಯಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಇದನ್ನು ಬಳಸಿ ನಮ್ಮ ಸ್ವಾಸ್ಥ್ಯದ...

Close