“ಶಿವಾಂಬು ಕಲ್ಪ” ಮಾಹಿತಿ ಚಿಕಿತ್ಸೆ

ಕಿನ್ನಿಗೋಳಿ: ನಮ್ಮ ಜೀವನ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು, ಸಾಂಪ್ರದಾಯಿಕ ಔಷಧೀಯ ಸಸ್ಯಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಇದನ್ನು ಬಳಸಿ
ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು ಎಂದು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ದಾದಿಯರ ಮೇಲ್ವಿಚಾರಕಿ ಭಗಿನಿ ಸೋಫಿಯಾ ಹೇಳಿದರು.
ಕಿನ್ನಿಗೋಳಿ ಸಂಜೀವಿನಿ ಸಂಸ್ಥೆ ಮತ್ತು ಕನ್ಸೆಟ್ಟಾ ಆಸ್ಪತ್ರೆಯ ಸಹಯೋಗದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ನಡೆದ ಉಚಿತ ಜೌಷಧಿ ಗಿಡ ವಿತರಣೆ ಮತ್ತು “ಶಿವಾಂಬು ಕಲ್ಪ” ಮಾಹಿತಿ ಚಿಕಿತ್ಸೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ದೊರೆಯುವ ಔಷಧೀಯ ಸಸ್ಯಗಳು ಮಾನವನ ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ, ಎಲ್ಲರೂ ಇಂತಹ ಔಷಧೀಯ ಸಸ್ಯಗಳನ್ನು ಗುರುತಿಸಿ ಅವುಗಳ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಶ್ರಮ ವಹಿಸಬೇಕು. ಈ ಔಷಧೀಯ ಸಸ್ಯಗಳು ನಶಿಸಿ ಹೋಹದಂತೆ ತಡೆಗಟ್ಟುವುದು ನಮ್ಮ ಆದ್ಯಕರ್ತವ್ಯ ಎಂದು ಉಡುಪಿ “ಶಿವಾಂಬು ಕಲ್ಪ” ಚಿಕಿತ್ಸಾ ತಜ್ಞ ಡಾ| ಸುಲೋಚನಾ ಹೇಳಿದರು.
ಕಿನ್ನಿಗೋಳಿ ಪರಿಸರದ ಜನರಿಗೆ ಉಚಿತ ಜೌಷಧಿ ಗಿಡಗಳನ್ನು ವಿತರಿಸಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ ಉಪಸ್ಥಿತರಿದ್ದರು.

ಕಿನ್ನಿಗೋಳಿ ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್ ಪ್ರಸ್ತಾವನೆಗೈದರು. ಸಂಜೀವಿನಿ ಸಮಾಜ ಸೇವಕಿ ಲಲಿತಾ ಭಾಸ್ಕರ್ ಸ್ವಾಗತಿಸಿ, ಗಿಡಮೂಲಿಕೆಗಳ ಬಗ್ಗೆ ಪೂರಕ ಮಾಹಿತಿ ನೀಡಿದರು, ಪ್ರಭಾ ಜಲ್ಲಿಗುಡ್ಡೆ ವಂದಿಸಿದರು, ಸಂಜೀವಿನಿ ಸಂಸ್ಥೆಯ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-1807201302

 

Comments

comments

Leave a Reply

Read previous post:
Kinnigoli-1807201301
ಇನ್ನರ್ ವೀಲ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯ. ಸೇವಾಚಟುವಟಿಕೆಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಾಗ ಸಾಮಾಜಿಕ ಸಂಬಂಧಗಳು ಗಟ್ಟಿಯಾಗುತ್ತದೆ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ...

Close