ಅಂಗರಗುಡ್ಡೆ- ಇಫ್ತಾರ್ ಕೂಟ

ಕಿನ್ನಿಗೋಳಿ: ಸಮಾಜದಲ್ಲಿ ಶಾಂತಿ ಸೌಹಾರ್ದ್ಯತೆ ಹಾಗೂ ಪ್ರೀತಿ ವಿಶ್ವಾಸದಿಂದ ಎಲ್ಲವನ್ನು ಜಯಿಸಬಹುದು. ಜನರನ್ನು ಜಾಗೃತಿಗೊಳಿಸುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗಬೇಕು. ಎಲ್ಲಾ ಧರ್ಮದ ಬಗ್ಗೆ ಗೌರವದಿಂದ ಕಾಣುವವನೇ ಧರ್ಮಾತ್ಮನಾಗಿ ಗುರುತಿಸಿಕೊಳ್ಳುತ್ತಾನೆ ಎಂದು ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಧರ್ಮಗುರು ಎಸ್.ಪಿ.ಮಹಮ್ಮದ್ ದಾರಿಮಿ ಹೇಳಿದರು.
ಮೂಲ್ಕಿ ಸಮೀಪದ ಕೆಂಚನಕೆರೆಯ ಅಂಗರಗುಡ್ಡೆ ಮಸೀದಿ ಮತ್ತು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಸಹಯೋಗದಲ್ಲಿ ಮಂಗಳವಾರ ಅಂಗರಗುಡ್ಡೆ ಅಲ್ ಮದರಸತುಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆದ ಇಫ್ತಾರ್ ಕೂಟ ಉದ್ಘಾಟಿಸಿ ಮಾತನಾಡಿದರು.
ಮಸೀದಿಯ ಆಡಳಿತ ಸಮಿತಿಯ ರಿಯಾಜ್ ಅಂಗರಗುಡ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಇಫ್ತಾರ್ ಕೂಟವನ್ನು ಸಂಯೋಜಿಸಿದ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ಅವರನ್ನು ಮಸೀದಿಯ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು.
ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ್, ಧರ್ಮಗುರು ಉಮ್ಮರ್ ಮದನಿ, ಟಿ.ಕೆ.ಇಬ್ರಾಹಿಂ ಮುಸ್ಲಿಯಾರ್, ಮೂಲ್ಕಿ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಕಾರ್ನಾಡು, ರೋಟರಾಕ್ಟ್ನ ನಿಯೋಜಿತ ಅಧ್ಯಕ್ಷ ಪ್ರಣೀಲ್ ಹೆಗ್ಡೆ, ಕಿನ್ನಿಗೋಳಿ ರೋಟರಿಯ ಮಾಜಿ ಅಧ್ಯಕ್ಷ ಶರತ್ ಶೆಟ್ಟಿ, ರೋಟರಾಕ್ಟ್ ಮಾಜಿ ವಲಯ ಪ್ರತಿನಿಧಿ ಸುಧಾಕರ ಸಾಲ್ಯಾನ್, ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್‌ ಕುಮಾರ್, ವಿಜಯ ಕಲಾವಿದರು ನಾಟಕ ತಂಡದ ಕಲಾವಿದ ಸೀತಾರಾಮ್ ಶೆಟ್ಟಿ ಎಳತ್ತೂರು, ಪತ್ರಕರ್ತ ನರೇಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli23071304

Comments

comments

Leave a Reply

Read previous post:
Kinnigoli23071303
ಕಿನ್ನಿಗೋಳಿ ಸನ್ಮಾನ- ಲತಾ ಎಸ್ ಅಮೀನ್

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ವಲಯದಲ್ಲಿ ಮೂರು ವರ್ಷ ಒಕ್ಕೂಟ ಮೇಲ್ವಿಚಾರಕರಾಗಿ ಸೇವೆ ನೀಡಿದ ಲತಾ ಎಸ್ ಅಮೀನ್ ಅವರಿಗೆ ಕಿನ್ನಿಗೋಳಿ ಯುಗಪುರುಷ...

Close