ಕಿನ್ನಿಗೋಳಿ ಲಯನ್ಸ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಸೇವೆ ಮನೋಭಾವನೆಯಿಂದ ಆತ್ಮಸಂತೋಷ, ತೃಪ್ತಿ ಸಮಾಧಾನ ಸಿಗುತ್ತದೆ. ಸಮಾಜದ ಬಗ್ಗೆ ಕಳಕಳಿಯಿಂದಾಗಿ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಲಯನ್ಸ್ ಕ್ಲಬ್ ಉಪ ಜಿಲ್ಲಾ ಗವರ್ನರ್ ಕವಿತ ಎಸ್. ಶಾಸ್ತ್ರಿ ಹೇಳಿದರು.
ಕಿನ್ನಿಗೋಳಿ ಹೊಟೇಲ್ ಅಭಿನಂದನ್ ಸಭಾಭವನದಲ್ಲಿ ಇತ್ತೀಚಿಗೆ ನಡೆದ ಕಿನ್ನಿಗೋಳಿ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್‌ಗಳ ೨೦೧೩-೧೪ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ಲಯನ್ಸ್ ಅಧ್ಯಕ್ಷರಾಗಿ ವೈ. ಕೃಷ್ಣ ಸಾಲಿಯಾನ್, ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೊ, ಕೋಶಾಧಿಕಾರಿ ಲಾರೆನ್ಸ್ ಫೆರ್ನಾಂಡಿಸ್, ಮತ್ತು ಲಯನೆಸ್ ಅಧ್ಯಕ್ಷೆ ಸಂಜೀವಿ ಕೆ. ಸಾಲಿಯಾನ್, ಕಾರ್ಯದರ್ಶಿ ರೀಟಾ ಸೆರಾವೊ, ಕೋಶಾಧಿಕಾರಿ ಜುಡಿತ್ ಫೆರ್ನಾಂಡಿಸ್ ಆಯ್ಕೆಯಾದರು.
ಕಿನ್ನಿಗೋಳಿ ಲಯನ್ಸ್ ಮಾಜಿ ಕಾರ್ಯದರ್ಶಿ ಕೆ. ನಾಗೇಶ್, ಕೋಶಾಧಿಕಾರಿ ವೈ. ಯೋಗೀಶ್ ರಾವ್, ಲಯನೆಸ್ ಮಾಜಿ ಅಧ್ಯಕ್ಷೆ ಲೀಲಾ ಬಿ. ಬಂಜನ್, ಕಾರ್ಯದರ್ಶಿ ಸುರೇಖ ನಾಗೇಶ್, ಕೋಶಾಧಿಕಾರಿ ವತ್ಸಲಾ ವೈ. ರಾವ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಮಾಜಿ ಅಧ್ಯಕ್ಷ ಭುಜಂಗ ಬಂಜನ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೊ ಧನ್ಯವಾದವಿತ್ತರು, ಮಾಜಿ ಅಧ್ಯಕ್ಷ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli23071307

Comments

comments

Leave a Reply

Read previous post:
Kinnigoli23071306
ಕಿನ್ನಿಗೋಳಿ-ಆಳ್ವಾಸ್ ವಿಶ್ವನುಡಿಸಿರಿ

ಕಿನ್ನಿಗೋಳಿ: ಪೂರ್ವಜರ ಶ್ರೀಮಂತ ಭಾಷೆ ಮತ್ತು ವೈಜ್ಞಾನಿಕ ತಳಹದಿಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಜನರ ಸಹಕಾರದಿಂದ ಕನ್ನಡ ಸೇವೆ ಮಾಡಲು ಸಾಧ್ಯ. ಸುಂದರವಾದ ಮನಸ್ಸುಗಳನ್ನು...

Close