ಕಿನ್ನಿಗೋಳಿ ನುಗ್ಗೆ ಕೃಷಿ ತರಬೇತಿ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯು ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಸ್ವಾವಲಂಬನೆಯ ಮೂಲಕ ಅದಾಯ ವೃದ್ಧಿಸುವ ಕೆಲಸಕ್ಕೆ ಪ್ರೇರಣೆ ನೀಡಿ ಸ್ವ ಸಹಾಯ ಸಂಘಗಳ ಕೃಷಿ ಅಭಿವೃದ್ಧಿ, ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುತ್ತಿದೆ. ಜನ ಸಾಮಾನ್ಯರೂ ಬೆಳೆಸಲು ಸುಲಭವಾಗುವ ವಾಣಿಜ್ಯ ಬೆಳೆ ನುಗ್ಗೆ ಕೃಷಿಯಾಗಿದೆ. ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಹೇಳಿದರು.
ಮೆನ್ನಬೆಟ್ಟು ಕೆಮ್ಮಡೆ ಕಲ್ಯಾಣಿ ಅವರ ಕೃಷಿ ತಾಕುವಿನಲ್ಲಿ ಶನಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ನುಗ್ಗೆ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ತರಬೇತಿಗಳ ಮೂಲಕ ರೈತರಲ್ಲಿ ಹೊಸ ಬೆಳೆಗಳ ಬಳಕೆಯನ್ನು ಅನುಷ್ಠಾನಗೊಳಿಸಿದಾಗ ರೈತರಿಗೆ ಹೆಚ್ಚು ಆದಾಯ ಸಿಗುವುದು ಎಂದು ಕಿನ್ನಿಗೋಳಿ ವಲಯ ಅಧ್ಯಕ್ಷೆ ಸುಜಾತ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ ಎಂ. ನುಗ್ಗೆ ಬೆಳೆಯ ಬಗ್ಗೆ ನಾಟಿ ವಿಧಾನ, ಗೊಬ್ಬರ ಒದಗಣೆ, ಕೀಟ ಮತ್ತು ರೋಗದ ಬಗ್ಗೆ, ಇಳುವರಿ ಮತ್ತು ಅದಾಯದ ಬಗ್ಗೆ ಮಾಹಿತಿ ನೀಡಿದರು.
ನಡುಗೋಡು ಒಕ್ಕೂಟ ಅಧ್ಯಕ್ಷೆ ಪುಷ್ಪ, ಕೃಷಿ ಸಹಾಯಕ ದಿವಾಕರ, ಸೇವಾಪ್ರತಿನಿಧಿ ಶ್ರೀಕಲಾ, ಸುರೇಖ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಲೀಲಾ ಪ್ರಸನ್ನ ಪ್ರಾರ್ಥಿಸಿ, ಶೈಲಾ ಶೆಟ್ಟಿ ಸ್ವಾಗತಿಸಿದರು, ಉಷಾ ಜೆ. ವಂದಿಸಿದರು. ಸೇವಾನಿರತ ದೇವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Kinnigoli23071308

Comments

comments

Leave a Reply