ಕಿನ್ನಿಗೋಳಿ ಬೃಹತ್ ಜನಜಾಗೃತಿ ಜಾಥಾ

ಕಿನ್ನಿಗೋಳಿ: ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಮ ಮಟ್ಟದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ವಿರುದ್ದ ಜನ ಜಾಗೃತಿ ಮೂಡಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹೇಳಿದರು.

ಐಕಳ ಪೊಂಪೈ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಸಿ.ಸಿ., ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಸಾಂಸ್ಕೃತಿಕ ಸಂಘ ಪೊಂಪೈ ಕಾಲೇಜು, ಐಕಳ ಗ್ರಾಮ ಪಂಚಾಯಿತಿ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಕಿನ್ನಿಗೋಳಿ,ರಿಕ್ಷಾ ಚಾಲಕರ ಮಾಲಕರ ಸಂಘ ಕಿನ್ನಿಗೋಳಿ ಸಹಬಾಗಿತ್ವದಲ್ಲಿ ಶನಿವಾರ ಐಕಳ ಪೊಂಪೈ ಕಾಲೇಜಿನಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ವರೆಗೆ ನಡೆದ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ವಿರುದ್ದ ಬೃಹತ್ ಜನಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದರು.
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭಾಸ್ಕರ ಕೋಟ್ಯಾನ್ ಸಂಪನಊಲ ವ್ಯಕ್ತಿಯಾಗಿ ಡೆಂಗ್ಯೂ ಮತ್ತು ಮಲೇರಿಯಾ ಜ್ವರದ ಬಗ್ಗೆ ಮಾಹಿತಿ ನೀಡಿದರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ಸಾಲಿಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಕೆ ಸಾಲಿಯಾನ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬಟ್ ರುಸಾರಿಯೊ, ರಿಕ್ಷಾ ಚಾಲಕ ಮಾಲಕ ಸಂಘ ಅಧ್ಯಕ್ಷ ಮಾಧವ ಮುಚ್ಚೂರು, ಐಕಳ ಗ್ರಾಮ ಪಂಚಾಯಿತಿ ಗ್ರಾಮ ಕರಣಿಕ ಲೋಕೇಶ್, ಕಾರ್ಯದರ್ಶಿ ರವೀಂದ್ರ ಪೈ, ಯೋಗೀಶ ಕೋಟ್ಯಾನ್, ಎನ್ ಸಿ ಸಿ ಅಧಿಕಾರಿ ಪುರುಷೋತ್ತಮ ಕೆ.ವಿ. ಹಾಗೂ ಎನ್ ಎಸ್ ಎಸ್ ಅಧಿಕಾರಿ ಡಾ| ಗುಣಕರ, ಪ್ರಾಧ್ಯಾಪಕ ಡಾ| ವಿಕ್ಟರ್ ವಾಜ್, ಪ್ರೊ. ಯೋಗೀಂದ್ರ ಬಿ., ಪ್ರೊ. ನೇಮಿಚಂದ್ರ ಗೌಡ, ಪ್ರೊ. ರಿಚರ್ಡ್ ಸಿಕ್ವೇರ ಮತ್ತ್ತಿತರರು ಉಪಸ್ಥಿತರಿದ್ದರು.

Kinnigoli23071305

 

 

Comments

comments

Leave a Reply

Read previous post:
Kinnigoli23071304
ಅಂಗರಗುಡ್ಡೆ- ಇಫ್ತಾರ್ ಕೂಟ

ಕಿನ್ನಿಗೋಳಿ: ಸಮಾಜದಲ್ಲಿ ಶಾಂತಿ ಸೌಹಾರ್ದ್ಯತೆ ಹಾಗೂ ಪ್ರೀತಿ ವಿಶ್ವಾಸದಿಂದ ಎಲ್ಲವನ್ನು ಜಯಿಸಬಹುದು. ಜನರನ್ನು ಜಾಗೃತಿಗೊಳಿಸುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ಆಗಬೇಕು. ಎಲ್ಲಾ ಧರ್ಮದ ಬಗ್ಗೆ ಗೌರವದಿಂದ ಕಾಣುವವನೇ...

Close